ADVERTISEMENT

ಮೋದಿ ಟೀಕಿಸಿದ್ದ ಸಿದ್ದರಾಮಯ್ಯ: ಲಘು ಮಾತು ಸಲ್ಲದು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:01 IST
Last Updated 1 ಮಾರ್ಚ್ 2019, 20:01 IST

ಕಾಂಗ್ರೆಸ್ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ವಿಜಯಪುರದಲ್ಲಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಬಗೆ ಕೀಳು ಮಟ್ಟದ್ದಾಗಿತ್ತು. ಅವರು ಹೇಳಿದ ಮಾತುಗಳು ಹೀಗಿದ್ದವು: ‘ಸುಳ್ಳೇ ತನ್ನ ದೇವರೆಂದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಹುಟ್ಟಿದ್ದೇ ವಿಪರ್ಯಾಸ. ಅವರೊಬ್ಬ ಮಹಾನ್‌ ಸುಳ್ಳುಗಾರ ಅಂಬಾನಿ ಜತೆ ₹ 39,000 ಕೋಟಿ ಲೂಟಿ ಮಾಡಿದವರು. ಚೌಕಿದಾರ ಅಲ್ಲ, ನೀವು ಈ ದೇಶದ ಚೋರ್, ಭ್ರಷ್ಟಾಚಾರದ ಭಾಗಿದಾರ್’.

ತಮ್ಮ ನಾಲಿಗೆ ಸಡಿಲಬಿಟ್ಟು ಯಾರ ಬಗ್ಗೆ ಮಾತನಾಡುತ್ತಿದ್ದಾರೋ ಆ ವ್ಯಕ್ತಿ ಈ ದೇಶದ ಪ್ರಧಾನಿ ಎನ್ನುವುದನ್ನು ಸಿದ್ದರಾಮಯ್ಯ ಮರೆತಂತಿತ್ತು. ಪಕ್ಷದ ಕೆಳ ಹಂತದಲ್ಲಿ ಅಷ್ಟೇನೂ ಶಿಕ್ಷಣವಿಲ್ಲದ, ಜವಾಬ್ದಾರಿಯೂ ಬೇಕಿಲ್ಲದ ಕಾರ್ಯಕರ್ತ ಕೂಡ ಹೀಗೆ ಲಘುವಾಗಿ ಮಾತನಾಡಬಾರದು ಎನ್ನುವುದು ಯಾವುದೇ ಪಕ್ಷ ವಿಧಿಸುವ ಶಿಸ್ತು. ಪ್ರಮುಖ ರಾಜಕೀಯ ಮುಖಂಡರೊಬ್ಬರು ಅಲ್ಲಿ ನೆರೆದಿದ್ದವರ ಎದುರು ಪ್ರಧಾನಿ ವಿರುದ್ಧ ಹೀಗೆ ಕ್ಷುಲ್ಲಕ ಮಾತುಗಳನ್ನು ಆಡುವುದು ಏನನ್ನು ಸೂಚಿಸುತ್ತದೆ? ಆಡುವ ಮಾತು, ಮಾಡುವ ವಿಚಾರ ಒಬ್ಬ ವ್ಯಕ್ತಿ ತಾನು ಪೋಷಿಸಿಕೊಂಡು ಬಂದ ಸಂಸ್ಕಾರಕ್ಕೆ, ರೂಪಿಸಿಕೊಂಡ ಮನಸ್ಸಿನ ಪರಿಪಾಕಕ್ಕೆ ಕೈಗನ್ನಡಿ. ಇದು ನಮ್ಮ ಮಾಜಿ ಮುಖ್ಯಮಂತ್ರಿಗೆ ತಿಳಿದಿರಬೇಕಿತ್ತು.

–ಸಾಮಗ ದತ್ತಾತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.