ADVERTISEMENT

ಪ್ರತಿಮೆ ಸ್ಥಾಪನೆ: ಸಲ್ಲದ ವಿವಾದ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಆಗಸ್ಟ್ 2020, 19:45 IST
Last Updated 30 ಆಗಸ್ಟ್ 2020, 19:45 IST

ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಅವರು ಜಾತಿ, ಸಮುದಾಯ, ರಾಜಕೀಯವನ್ನು ಮೀರಿದ ಇಡೀ ದೇಶದ ಆದರ್ಶ ವೀರ ಪುರುಷರು. ಆದರೆ ಇವರಿಬ್ಬರ ಪ್ರತಿಮೆ ಪ್ರತಿಷ್ಠಾಪನೆಯ ವಿಚಾರವಾಗಿ ಬೆಳಗಾವಿ ಬಳಿಯ ಪೀರನವಾಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪರೋಕ್ಷವಾಗಿ ರಾಜಕೀಯ ಸ್ವರೂಪ ಪಡೆದು, ಅಶಾಂತಿಗೆ ಕಾರಣವಾಗಿರುವುದು ದುರ್ದೈವದ ಸಂಗತಿ.

ಯಾವುದೇ ಒಬ್ಬ ಮಹಾನ್ ಪುರುಷನ ವ್ಯಕ್ತಿತ್ವ, ಸಾಧನೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದ ವ್ಯಕ್ತಿಯು ಆ ಮಹಾನ್ ಪುರುಷನ ಅಭಿಮಾನಿ ಅಥವಾ ವಿಮರ್ಶಕ ಆಗಲು ಅರ್ಹನಲ್ಲ. ದೇಶಕ್ಕಾಗಿ ಹೋರಾಡಿದವರ ವಿಷಯವನ್ನಿಟ್ಟುಕೊಂಡು ಎರಡು ಭಾಷಿಕ ಸಮುದಾಯಗಳ ಮಧ್ಯೆ ಗೊಂದಲ ಸೃಷ್ಟಿ ಮಾಡುವುದು ಆ ಮಹಾನ್ ವ್ಯಕ್ತಿಗಳಿಗೆ ಮಾಡುವ ಮಹಾ ಅಪಮಾನ. ಈ ವಿಚಾರವಾಗಿ ರಾಜ್ಯದ ನಾಯಕರು ಜಾಣಮೌನ ಮೆರೆಯುತ್ತಿರುವುದು ಅವರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ. ಈ ಬಗೆಯ ನಡೆಯು ಭವಿಷ್ಯದಲ್ಲಿ ಅಶಾಂತಿ ಹಾಗೂ ದುರ್ಘಟನೆಗಳು ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಾಡಿನ ಎಲ್ಲ ನಾಯಕರು ರಾಜಕಾರಣ, ಪಕ್ಷ, ಜಾತಿಯನ್ನು ಬದಿಗಿಟ್ಟು ಒಮ್ಮತದಿಂದ ಕನ್ನಡತನವನ್ನು ಪ್ರದರ್ಶಿಸಬೇಕು. ಸುಖಾ ಸುಮ್ಮನೆ ಅಶಾಂತಿ ಸೃಷ್ಟಿಸುವ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು.

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.