ADVERTISEMENT

ಕಲ್ಲು ಗಣಿಗಾರಿಕೆ: ಬೀಳಲಿ ಕಡಿವಾಣ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 15:24 IST
Last Updated 12 ಫೆಬ್ರುವರಿ 2021, 15:24 IST

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪರಸಾಪುರ ಗ್ರಾಮದ ಮನೆಗಳ ಗೋಡೆಗಳು ಕಲ್ಲು ಗಣಿಗಾರಿಕೆಯಿಂದಾಗಿ ಬಿರುಕು ಬಿಡುತ್ತಿರುವ ವರದಿ (ಪ್ರ.ವಾ., ಫೆ. 12) ಓದಿ ಆತಂಕವಾಯಿತು. ಹೀಗೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಕಲ್ಲು ಗಣಿಗಾರಿಕೆಯಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕಲ್ಲು ಗಣಿಗಾರಿಕೆಗಾಗಿ ನಡೆಯುವ ಸ್ಫೋಟದಿಂದ ಜಮೀನುಗಳ ಫಲವತ್ತತೆ ಕಡಿಮೆಯಾಗಿ ಸಾಗುವಳಿ ಭೂಮಿಯು ಬಂಜರು ಭೂಮಿಯಾಗುತ್ತಿದೆ.

ಅಧಿಕ ಭಾರ ಹೊತ್ತು ಸಾಗುವ ಟಿಪ್ಪರ್‌ಗಳಿಂದ ಗ್ರಾಮದ ರಸ್ತೆಗಳೂ ಹಾಳಾಗುತ್ತಿವೆ. ಸರ್ಕಾರವು ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಗಣಿಗಾರಿಕೆಗೆ ಅನುಮತಿ ನೀಡುವ ಮೊದಲು ಅಧಿಕಾರಿಗಳು ರೈತರ ಜಮೀನುಗಳನ್ನು ಪರಿಶೀಲಿಸಿ, ಅನುಮತಿ ನೀಡುವ ಬಗ್ಗೆ ಆನಂತರ ನಿರ್ಧರಿಸುವುದು ಒಳಿತು.

- ಶ್ರೀಧರ ಎಸ್. ವಾಣಿ,ಕಲ್ಲತಾವರಗೇರಿ, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.