ADVERTISEMENT

ಮಂಗಳಸೂತ್ರಕ್ಕೆ ನಿರ್ಬಂಧ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 16:31 IST
Last Updated 22 ಸೆಪ್ಟೆಂಬರ್ 2019, 16:31 IST

ಇಂದಿನಿಂದ (ಸೆ. 23) ಆರಂಭವಾಗಲಿರುವ ಜೂನಿಯರ್‌ ಎಂಜಿನಿಯರ್‌ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಲು ಅನುಮತಿ ಇಲ್ಲದ ಬಹಳಷ್ಟು ವಸ್ತುಗಳಲ್ಲಿ ಮಂಗಳ ಸೂತ್ರವನ್ನೂ ಸೇರಿಸಲಾಗಿದೆ.

ಇದು ಸಮುದಾಯ ವಿರೋಧಿ ಚಟುವಟಿಕೆ. ಮಂಗಳ ಸೂತ್ರಕ್ಕೆ ತನ್ನದೇ ಆದ ಗೌರವ ಇದೆ. ಹೆಚ್ಚಿನ ಮಹಿಳೆಯರು ಅದನ್ನು ತೆಗೆಯುವುದು ಗಂಡ ತೀರಿಕೊಂಡ ನಂತರ. ಹೀಗಾಗಿ, ಅದನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸುವುದು ಸರಿಯಲ್ಲ.

ಅರವಿಂದ ಬೇವಿನಗಿಡದ,ಕೋಹಳ್ಳಿ, ಅಥಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.