ADVERTISEMENT

ವಾಚಕರ ವಾಣಿ: ಶಿಕ್ಷಕನೇ ಅಡ್ಡದಾರಿ ಹಿಡಿದರೆ...

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 19:31 IST
Last Updated 14 ಡಿಸೆಂಬರ್ 2022, 19:31 IST

ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕರೊಬ್ಬರು ದೇವಸ್ಥಾನಗಳಲ್ಲಿ ಕಳವು ಮಾಡುತ್ತಿದ್ದರು ಎಂಬ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸುದ್ದಿ (ಪ್ರ.ವಾ., ಡಿ. 14) ಓದಿ ಗಾಬರಿಗೆ ಒಳಗಾದೆ. ಮಕ್ಕಳಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ಮಾಡಬೇಕಾಗಿದ್ದ ಶಿಕ್ಷಕರೇ ಹೀಗೆ ಅಡ್ಡದಾರಿ ಹಿಡಿದಿರುವುದು ದುರಂತದ ಸಂಗತಿ. ಐಷಾರಾಮಿ ಬದುಕಿನ ಹಂಬಲ ಎಂಥವರನ್ನೂ ಹಾದಿ ತಪ್ಪಿಸಬಹುದು ಎಂಬುದಕ್ಕೆ ಇದೊಂದು ನಿದರ್ಶನ.

ಸರ್ಕಾರಿ ನೌಕರಿ. ತಕ್ಕಮಟ್ಟಿಗೆ ಸಂಬಳದ ಜೊತೆ ಸೇವಾ ಭದ್ರತೆ ಇರುವಂಥ ಉದ್ಯೋಗ. ಗ್ರಾಮದಲ್ಲಿ ವಾಸ. ಸಮಾಜದಲ್ಲಿ ಗೌರವ. ಮಕ್ಕಳಿಗೆ ಪಾಠ ಹೇಳಿಕೊಂಡು ನೆಮ್ಮದಿಯಿಂದ ಜೀವನ ನಡೆಸಲು ಇದಕ್ಕಿಂತ ಇನ್ನೇನು ಬೇಕು? ಶಿಕ್ಷಕ ವೃತ್ತಿಗೆ ಕಳಂಕ ತಂದಿರುವ ಇಂಥವರಿಗೆ ತ್ವರಿತವಾಗಿ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

- ಸೌಜನ್ಯ ಟಿ.,ದೊಡ್ಡಬಳ್ಳಾಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.