ADVERTISEMENT

ಸಮಸ್ಯೆಗಳ ನಿಯಂತ್ರಣ ನಮ್ಮ ಕೈಯಲ್ಲೇ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 18:45 IST
Last Updated 24 ಜೂನ್ 2020, 18:45 IST

ನಾವು ಯಾವುದೇ ಶೋಷಣೆ ಮಾಡದೆ ಪ್ರಕೃತಿಯನ್ನು ಅದರ ಪಾಡಿಗೆ ಬಿಟ್ಟರೆ, ಆಕೆ ಮನುಕುಲಕ್ಕೆ ಅಗತ್ಯವಾಗಿರುವುದನ್ನೇ ನೀಡುತ್ತಾಳೆ ಎನ್ನುವುದಕ್ಕೆ, ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರಕೃತಿಯಲ್ಲಿ ಉಂಟಾದ ಆರೋಗ್ಯಕರ ಬದಲಾವಣೆಯೇ ಸಾಕ್ಷಿ. ಆದರೆ ಇದ್ಯಾವುದೂ ಶಾಶ್ವತವಲ್ಲ ಎಂಬಂತೆ, ದೇಶ ಅನ್‍ಲಾಕ್ ಆಗುತ್ತಿದ್ದಂತೆಯೇ ಪರಿಸರಕ್ಕೆ ಸಂಬಂಧಿಸಿದ ಹಿಂದಿನ ಎಲ್ಲಾ ಸಮಸ್ಯೆಗಳು ಮರುಕಳಿಸುತ್ತಿವೆ. ಸಮಸ್ಯೆಯ ಪ್ರಮಾಣವನ್ನು ಹತೋಟಿ
ಯಲ್ಲಿಡುವುದು ನಮ್ಮ ಕೈಯಲ್ಲೇ ಇದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರ ಜೊತೆಗೆ ಸಮೂಹ ಸಾರಿಗೆಗೆ ಒತ್ತು ನೀಡುವ ಮೂಲಕ ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸುವುದು, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪೂರಕವಾದ ಕ್ರಮಗಳು, ನದಿ ನೀರಿನ ಶುದ್ಧೀಕರಣ, ಪ್ಲಾಸ್ಟಿಕ್ ಬದಲು ಪರಿಸರ ಸ್ನೇಹಿ ವಸ್ತುಗಳ ಬಳಕೆಯಂತಹ ಸಂಗತಿಗಳ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಬೇಕಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಇಂತಹ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ನಮ್ಮ ನಾಯಕರ ಮೇಲಿದೆ.

-ಶ್ರೀರಕ್ಷಾ,ಶಿರ್ಲಾಲು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.