ADVERTISEMENT

ಕೆಲಸದ ಸಮಯ ನಿಗದಿಯಾಗಲಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:52 IST
Last Updated 5 ಆಗಸ್ಟ್ 2019, 19:52 IST

ನೌಕರರು, ವ್ಯಾಪಾರಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ಅಷ್ಟೇ ಯಾಕೆ ಎಲ್.ಕೆ.ಜಿ ಮಕ್ಕಳಿಗೂ ನಿತ್ಯ ಕೆಲಸದ ಸಮಯ ನಿಗದಿ ಆಗಿರುತ್ತದೆ. ಆ ಸಮಯದಲ್ಲಿ ಅವರು ಇಂತಿಷ್ಟು ಕೆಲಸ ಮಾಡಲೇಬೇಕಾದ ನಿರ್ಬಂಧ ಇರುತ್ತದೆ. ಆದರೆ, ಈ ಜನಪ್ರತಿನಿಧಿಗಳಿಗೆ ಸಾರ್ವಜನಿಕರಕೆಲಸ ಮಾಡಲುಯಾಕೆ ಸಮಯ ನಿಗದಿ ಇಲ್ಲ? ಇವರುಯಾವಾಗ ಸಿಗುತ್ತಾರೆ ಎಂಬುದು ತಿಳಿಯದೆ, ಸಣ್ಣಪುಟ್ಟ
ಕೆಲಸಕ್ಕಾಗಿ ಜನರು ಇಡೀ ದಿನ ಇವರಿಗಾಗಿ ಕಾಯಬೇಕಾಗಿದೆ. ಕೆಲವರಂತೂ ತಿಂಗಳುಗಟ್ಟಲೆ ತಮ್ಮ ಕಚೇರಿಗೆ ಅಥವಾ ಕ್ಷೇತ್ರಕ್ಕೆ ಬರುವುದೇ ಇಲ್ಲ. ಬಂದರೂ ಯಾವಾಗ ಬಂದು ಹೋದರು ಎಂಬುದೇ ಗೊತ್ತಾಗುವುದಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯವರೆಗೆ ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ತಮ್ಮ ಕಚೇರಿಯಲ್ಲಿ ಇಂತಿಷ್ಟು ಗಂಟೆ ಇದ್ದು, ಜನರ ಕೆಲಸ ಮಾಡುವಂತೆ ಸರ್ಕಾರ ಯಾಕೆ ನಿಯಮ ರೂಪಿಸಬಾರದು? ಆಗಲಾದರೂ ಜನಪ್ರತಿ
ನಿಧಿಗಳು ರೆಸಾರ್ಟ್, ಪ್ರವಾಸ, ದೇವಸ್ಥಾನ ಎಂದೆಲ್ಲ ಸುತ್ತಿ ಸಮಯ ಹಾಗೂ ಜನರ ಹಣ ಪೋಲು ಮಾಡುವುದನ್ನು ತಪ್ಪಿಸಬಹುದು.

-ವಿ.ತಿಪ್ಪೇಸ್ವಾಮಿ,ಹಿರಿಯೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.