ADVERTISEMENT

ಇದೂ ಒಂದು ಶಿಕ್ಷೆಯೇ?

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:17 IST
Last Updated 28 ಸೆಪ್ಟೆಂಬರ್ 2021, 17:17 IST

‘ತಲೆದಂಡ‌’ ಅಂದರೆ ಸರ್ಕಾರಿ ಭಾಷೆಯಲ್ಲಿ ವರ್ಗಾವಣೆ ಅಂತ ಅರ್ಥವೇ? ಏಕೆಂದರೆ ಸರ್ಕಾರಿ ಅಧಿಕಾರಿಗಳ ಮೇಲೆ ಗುರುತರ ಆರೋಪಗಳು ಬಂದು, ಅವು ಸಾಬೀತಾಗುವ ಹಂತಕ್ಕೆ ಬಂದಾಗ, ಅವರನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಆಗ, ‘ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ‌, ಅವರ ತಲೆದಂಡ ಆಯಿತು’ ಎನ್ನುತ್ತದೆ ಸರ್ಕಾರ. ಅಧಿಕಾರಿಗಳು ಎಲ್ಲಿದ್ದರೂ, ಯಾವ ಇಲಾಖೆಯಲ್ಲಿ ಕೆಲಸ ಮಾಡಿದರೂ ಅವರಿಗೆ ಸಂಬಳ ಮತ್ತು ಇತರ ಸೌಲಭ್ಯಗಳು ಇದ್ದೇ ಇರುತ್ತವೆ. ಹಾಗಿದ್ದಮೇಲೆ ಅವರು ಮಾಡಿದ ತಪ್ಪುಗಳಿಗೆ ಹೇಗೆ ಶಿಕ್ಷೆ ಕೊಟ್ಟ ಹಾಗಾಗುತ್ತದೆ?

– ಸುಗ್ಗನಹಳ್ಳಿ ಷಡಕ್ಷರಿ‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT