ADVERTISEMENT

ಅಲಂಕಾರರಹಿತ ವಾಹನ: ಬೇಸರದ ಸಂಗತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:31 IST
Last Updated 26 ಅಕ್ಟೋಬರ್ 2020, 19:31 IST

ಈ ಬಾರಿಯ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಿದ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ವಿಜಯದಶಮಿಯಂದು ನಾಡದೇವತೆ ಚಾಮುಂಡಿ ಮಾತೆಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಲ್ಲಿಯ ಚಾಮುಂಡೇಶ್ವರಿ ದೇಗುಲದಿಂದ ಮೈಸೂರಿನಲ್ಲಿರುವ ಅರಮನೆಗೆ ವಾಹನದಲ್ಲಿ ತರಲಾಯಿತು.

ಆದರೆ ಉತ್ಸವ ಮೂರ್ತಿಯನ್ನು ಹೊತ್ತ ವಾಹನಕ್ಕೆ ಯಾವುದೇ ತರಹದ ಹೂವಿನ ಅಲಂಕಾರ ಮಾಡಿರಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ವಾಹನಕ್ಕೆ ಅಲಂಕಾರ ಮಾಡಬೇಕೆಂಬುದು ಕಾರ್ಯಕ್ರಮದ ಉಸ್ತುವಾರಿ ಹೊತ್ತ ಅಧಿಕಾರಿಗಳಿಗೆ ಹೊಳೆಯಲಿಲ್ಲವೇ ಅಥವಾ ಅಸಡ್ಡೆ ಮನೋಭಾವವೇ? ಅತ್ಯಂತ ಸರಳವಾಗಿ ಆಚರಿಸುವುದು ಎಂದರೆ ಇದೇನೇ?‌

ಕೆ.ಪ್ರಭಾಕರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.