ADVERTISEMENT

ರಾಜಧಾನಿ ಮೇಲೆ ಹೊರೆ ತಗ್ಗಿಸಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST

ಬೆಂಗಳೂರಿನ ಅಗಾಧ ದಾ‌ಹ ನೀಗಿಸಲು ತುಂಗೆ ಹಾಗೂ ಭದ್ರಾ ನದಿಗಳಿಂದ ನೀರು ತರಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿರುವುದು ವರದಿಯಾಗಿದೆ. ಬದುಕಲು ನಾನಾ ಬಗೆಯ ಅನುಕೂಲ ಇರುವ ಬೆಂಗಳೂರಿಗೆ ರಾಜ್ಯದ ಇತರೆಡೆಗಳಿಂದ ಮಾತ್ರವಲ್ಲದೆ ರಾಷ್ಟ್ರದ ಅನೇಕ ಭಾಗಗಳಿಂದಲೂ ಜನರು ವಲಸೆ ಬರುತ್ತಿದ್ದಾರೆ. ಇದರ ಪರಿಣಾಮವೇ ರಾಜಧಾನಿಯ ಅತಿ ದಾಹಕ್ಕೆ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಬೆಂಗಳೂರು ಇನ್ನಷ್ಟು ವಿಸ್ತರಣೆಯಾಗುವುದು ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೀಗಾಗಿ, ರಾಜಧಾನಿಯ ಅಭಿವೃದ್ಧಿಗೆ ಮಾತ್ರ ಗಮನ ನೀಡದೆ, ರಾಜ್ಯದ ಇತರ ನಗರಗಳನ್ನೂ ಅಭಿವೃದ್ಧಿಪಡಿಸಿ ರಾಜಧಾನಿಗೆ ಜನರು ವಲಸೆ ತಪ್ಪಿಸಬೇಕಾದುದು ಅತ್ಯವಶ್ಯಕ. -ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.