ADVERTISEMENT

ವಾಚಕರ ವಾಣಿ | ಹೊಸ ಶಿಕ್ಷಣ ನೀತಿ: ಬೇಕಿದೆ ಪೂರ್ವಸಿದ್ಧತೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ಈ ವರ್ಷವೇ ಅಳವಡಿಸಿಕೊಳ್ಳುವುದರಿಂದ ಐಚ್ಛಿಕ ವಿಷಯಗಳಿಗೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತಗಳಲ್ಲಿ ಉಂಟಾಗಬಹುದಾದ ಗೊಂದಲಗಳು ಹಾಗೂ ಅಚಾತುರ್ಯಗಳ ಬಗ್ಗೆ ಶರತ್‌ ಅನಂತಮೂರ್ತಿ ಅವರು ತಮ್ಮ ಲೇಖನದಲ್ಲಿ (ಪ್ರ.ವಾ.,ಆ. 17) ಬಹಳ ತಾರ್ಕಿಕವಾಗಿ ವಿವರಿಸಿದ್ದಾರೆ. ಬಹುತೇಕ ಸರ್ಕಾರಿ ಕಾಲೇಜುಗಳ ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಮರ್ಪಕ ಪರಿಕರಗಳಿಲ್ಲದೆ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅಡ್ಡಿಯಾಗಿದೆ. ಹೊಸ ಶಿಕ್ಷಣ ನೀತಿಯು ಕೌಶಲ ತರಬೇತಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಿರುವುದರಿಂದ, ಪ್ರಯೋಗಾಲಯಗಳನ್ನುಉನ್ನತೀಕರಿಸಿದಾಗ ಮಾತ್ರ ಈ ನೀತಿಯ ಆಶಯ ಈಡೇರಲಿದೆ. ಜೊತೆಗೆ ಶಿಕ್ಷಕರನ್ನೂ ವಿದ್ಯಾಸಂಸ್ಥೆಗಳನ್ನೂ ಈ ದಿಸೆಯಲ್ಲಿ ಸಜ್ಜುಗೊಳಿಸಬೇಕಿದೆ. ಹೀಗಾಗಿ, ಹೊಸ ನೀತಿಯನ್ನು ಅನುಷ್ಠಾನಗೊಳಿಸುವ ಮುನ್ನ ಒಂದು ಅಥವಾ ಎರಡು ವರ್ಷಗಳ ಪರಿಪೂರ್ಣ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದುದು ಅತ್ಯಗತ್ಯ.

- ಡಾ. ನೇತ್ರಾವತಿ ವಿ.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT