ADVERTISEMENT

ಅಧಿಕಾರಿಗಳಿಗೆ ಕಷ್ಟ ಅರ್ಥವಾಗದು

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 19:45 IST
Last Updated 30 ಜನವರಿ 2020, 19:45 IST

1961ರಲ್ಲಿ ಸರ್ಕಾರ ತಮಗೆ ಮಂಜೂರು ಮಾಡಿದ್ದ ನಾಲ್ಕು ಎಕರೆ ಜಮೀನಿನ ಪತ್ತೆಗಾಗಿ 81 ವರ್ಷದ ವೃದ್ಧರೊಬ್ಬರು 15 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವ ಪರಿ (ಪ್ರ.ವಾ., ಜ. 29) ನೋಡುಗರಲ್ಲಿ ಕಣ್ಣೀರು ತರಿಸುವಂತಿದೆ. ರಾಜ್ಯದಲ್ಲಿ ಇಂತಹ ಸ್ಥಿತಿ ಕೇವಲ ಈ ವೃದ್ಧರೊಬ್ಬರಿಗೆ ಇಲ್ಲ. ಅನೇಕ ವಿಧವೆಯರು, ವಯಸ್ಸಾದವರು, ನಿವೃತ್ತ ನೌಕರರು, ಸೈನಿಕರು ಮಾಸಾಶನಕ್ಕಾಗಿ, ಪಿಂಚಣಿಗಾಗಿ ದಿನನಿತ್ಯವೂ ಅಲೆದಾಡುತ್ತಿರುತ್ತಾರೆ. ಅಧಿಕಾರಿಗಳಿಗೆ ಇವರ ಕಷ್ಟ ಅರ್ಥವಾಗದು. ಕಾಂಚಾಣ ಇದ್ದವರಿಗೆ ಮಾತ್ರ ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತವೆ. ಕಾಂಚಾಣ ಇಲ್ಲದವರ ಗೋಳು ಕೇಳುವವರು ಯಾರು?

- ಡಾ. ಶಿವರಾಜ ಯತಗಲ್,ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT