ADVERTISEMENT

ಅಡ್ಡದಾರಿಯ ಸಂಪಾದನೆಯೂ ಹೂಡಿಕೆ?

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:00 IST
Last Updated 13 ಜೂನ್ 2019, 20:00 IST
   

ಬಡವರಿಂದ ಹಣ ಪಡೆದು ಮೋಸ ಮಾಡುವ ‘ಐ ಮಾನಿಟರಿ ಅಡ್ವೈಸರಿ’ (ಐಎಂಎ) ಅಂತಹ ಕಂಪನಿಗಳಿಗೆ ಇರುವ ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆ. ಆದ್ದರಿಂದ ಇಂಥ ಮೋಸಗಳು ಪುನರಾವರ್ತನೆ ಆಗುತ್ತಲೇ ಇರುತ್ತವೆ. ಇನ್ನು ಮುಂದಾದರೂ ಇಂಥ ಕಂಪನಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕಾಗಿದೆ. ಜೊತೆಗೆ ಕಷ್ಟಪಡದೇ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬೇಕು ಎಂಬ ಜನರ ಮನೋಭಾವ ಸಹ ಬದಲಾಗಬೇಕು. ಕಷ್ಟಪಟ್ಟು ದುಡಿದ ದುಡ್ಡನ್ನು ಮಾತ್ರ ಇಲ್ಲಿ ಹೂಡಿಕೆ ಮಾಡಿರುವಂತೆ ಕಾಣುವುದಿಲ್ಲ. ಕೆಲವರು ವಾಮಮಾರ್ಗದಲ್ಲಿ ಪಡೆದ ಹಣವನ್ನೂ ಇಲ್ಲಿ ಹೂಡಿಕೆ ಮಾಡಿರುವಂತೆ ತೋರುತ್ತದೆ. ಹೀಗಾಗಿ ಈ ನಿಟ್ಟಿನಲ್ಲೂ ತನಿಖೆ ನಡೆಯಬೇಕಾಗಿದೆ. -ಮನು ಜಿ.ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.