ADVERTISEMENT

ಅರ್ಧಸತ್ಯ ಹೇಳುವ ಮತದಾನದ ಪ್ರಮಾಣ

ಎನ್.ನರಹರಿ
Published 22 ಏಪ್ರಿಲ್ 2019, 20:01 IST
Last Updated 22 ಏಪ್ರಿಲ್ 2019, 20:01 IST

ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದರ ಬಗೆಗಿನ ಸದ್ಯದ ಅಭಿಪ್ರಾಯಗಳು ಅರ್ಧಸತ್ಯವನ್ನಷ್ಟೇ ಹೇಳುತ್ತಿವೆ.

ಮತದಾರರ ಪಟ್ಟಿಗಳೇ ದೋಷಪೂರಿತವಿದ್ದು ಆಮೂಲಾಗ್ರ ಪರಿಷ್ಕರಣೆಗೆ ಒಳಗಾಗುವುದು ಅಗತ್ಯ. ನಗರದ ಹತ್ತಾರು ಪಟ್ಟಿಗಳಲ್ಲಿ ಹೆಸರು ಹೊಂದಿರುವ ಮತದಾರ ಖಂಡಿತವಾಗಿ ಹತ್ತಿರದ ಯಾವುದಾದರೂ ಒಂದು ಮತಗಟ್ಟೆಯಲ್ಲಿ ಮತ ಚಲಾಯಿಸುತ್ತಾನೆ.

ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸುವ ಹಾಗೂ ಕೈಬಿಡುವ ಕೆಲಸ ಸರಿಯಾಗಿ ಆಗುತ್ತಿಲ್ಲ. ವಲಸಿಗರು ನಗರದಲ್ಲಿದ್ದಷ್ಟು ಕಾಲ ಸೌಲಭ್ಯಗಳಿಗಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವಂತೆ ನೋಡಿಕೊಳ್ಳುತ್ತಾರೆ.

ADVERTISEMENT

ಬಳಿಕ ಸ್ವಂತ ಊರಿಗೋ ವಿದೇಶಕ್ಕೋ ಶಾಶ್ವತವಾಗಿ ಹೋದರೂ ಅವರ ಹೆಸರು ಮಾತ್ರ ಮತದಾರರ ಪಟ್ಟಿಯಿಂದ ಮರೆಯಾಗುವುದಿಲ್ಲ. ಇಂಥವರು ಸಾಕಷ್ಟಿದ್ದಾರೆ. ಇಂತಹವರನ್ನು ಪಟ್ಟಿಯಿಂದ ಕೈಬಿಟ್ಟರೆ, ಈಗಿನ ಮತದಾನದ ಅಂಕಿಅಂಶಗಳು ಬದಲಾಗುವುದಂತೂ ಸತ್ಯ.

– ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.