ADVERTISEMENT

ನೀರು ಸೋರಿಕೆ: ಜವಾಬ್ದಾರಿ ಇರಲಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST

ಬೆಂಗಳೂರು ನಗರದಲ್ಲಿ ನೀರು ಸೋರಿಕೆ ಪ್ರಮಾಣ ಶೇ 37ರಷ್ಟಿದೆ ಎಂಬ ಜಲಮಂಡಳಿ ಅಧ್ಯಕರ ಹೇಳಿಕೆ (ಪ್ರ.ವಾ., ನ. 3) ಗಂಭೀರವಾಗಿ ಯೋಚಿಸಬೇಕಾದದ್ದು. ಈ ಸೋರಿಕೆಗೆ ಕೇವಲ ಜಲಮಂಡಳಿಯನ್ನು ದೂಷಿಸದೆ, ನಗರದ ನಾಗರಿಕರು ಸಹ ಹೊಣೆಗಾರರು ಎಂಬುದನ್ನು ಮರೆಯುವಂತಿಲ್ಲ. ಮನೆಯಲ್ಲಿಯ ಸೋರುವ ನಲ್ಲಿಗಳನ್ನು ಸರಿಪಡಿಸದಿರುವುದು, ನೀರಿನ ಸಂಪ್ ತುಂಬಿದಾಗ ನೀರು ನಿಲ್ಲುವ ಹಾಗೆ ಸಂಪ್‍ನಲ್ಲಿ ಸೂಕ್ತ ಸಾಧನ ಅಳವಡಿಸದಿರುವುದು, ಸಂಪ್‍ನಿಂದ ಮಹಡಿ ಮೇಲಿನ ಟ್ಯಾಂಕ್‍ಗೆ ನೀರು ಹತ್ತುವುದಕ್ಕೆ ಸ್ವಯಂಚಾಲಿತ ನಿಯಂತ್ರಣ ಸಾಧನ ಅಳವಡಿಸದಿರುವುದು... ಈ ಎಲ್ಲವನ್ನೂ ನೀರು ಸೋರಿಕೆಯ ಅಡಿಯಲ್ಲೇ ಪರಿಗಣಿಸಬೇಕಾಗುತ್ತದೆ. ಇದರ ಪ್ರಮಾಣ ಒಟ್ಟಾರೆ ಸೋರಿಕೆ ಪ್ರಮಾಣಕ್ಕೆ ಹೋಲಿಸಿದಲ್ಲಿ ಗಣನೀಯವಲ್ಲದೇ ಇರಬಹುದು. ಆದರೆ ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ, ಜವಾಬ್ದಾರಿಯುತ ನಾಗರಿಕರು ಇವುಗಳ ಕಡೆ ಗಮನಹರಿಸಿದಲ್ಲಿ ಸೋರಿಕೆ ಪ್ರಮಾಣ ತುಸುವಾದರೂ ಕಡಿಮೆ ಆಗಲಿದೆ.

ನಾಗರಿಕರಿಗೆ ಜಲಮಂಡಳಿ ಇತ್ತೀಚೆಗೆ ಒಂದು ನಮೂನೆಯನ್ನು ನೀಡಿದ್ದು, ಅದರಲ್ಲಿ ನೀರಿನ ಸಂಪ್‍ನಿಂದ ಮಹಡಿ ಮೇಲಿನ ಟ್ಯಾಂಕ್‍ಗೆ ನೀರು ಹತ್ತುವುದಕ್ಕೆ ಸ್ವಯಂಚಾಲಿತ ನಿಯಂತ್ರಣ ಸಾಧನ ಅಳವಡಿಸಿರುವ ಬಗ್ಗೆ ಮಾಹಿತಿ ಕೇಳಿದೆ. ನೀರಿನ ಸಂಪ್ ತುಂಬಿದಾಗ ನೀರು ನಿಲ್ಲುವ ಹಾಗೆ ಸಾಧನ ಅಳವಡಿಸಿರುವ ಬಗ್ಗೆ ಮಾಹಿತಿ ಕೇಳಿಲ್ಲ. ಎಷ್ಟೋ ಮನೆಗಳಲ್ಲಿ ಸಂಪ್‍ನಲ್ಲಿ ಇಂತಹ ಸಾಧನಗಳನ್ನು ಅಳವಡಿಸದಿರುವ ಕಾರಣ ನೀರು ಪೋಲಾಗುತ್ತಿದೆ. ಈ ಮಾಹಿತಿಯನ್ನು ಕಲೆಹಾಕಲು ನಮೂನೆಯನ್ನು ಮಾರ್ಪಡಿಸುವುದು ಅತ್ಯಂತ ಅವಶ್ಯಕ.

- ಕೆ.ಪ್ರಭಾಕರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.