ADVERTISEMENT

ವಾಚಕರವಾಣಿ| ಹುದ್ದೆ ಭರ್ತಿಗೆ ತೊಡಕೇನು?

​ಪ್ರಜಾವಾಣಿ ವಾರ್ತೆ
Published 29 ಮೇ 2022, 19:30 IST
Last Updated 29 ಮೇ 2022, 19:30 IST

ಹುದ್ದೆ ಭರ್ತಿಗೆ ತೊಡಕೇನು?

ಬಿಜೆಪಿಯ ಯುವ ಸಂಸದ ವರುಣ್ ಗಾಂಧಿ ತಮ್ಮದೇ ಪಕ್ಷದ ವಿರುದ್ಧ ಧ್ವನಿಯೆತ್ತಿದ್ದಾರೆ. ಖಾಲಿ ಇರುವ 60 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ತುಂಬದೇ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವಕರ ಬಗೆಗಿನ ಅವರ ಕಾಳಜಿಯ ಬಗ್ಗೆ ಸಂತೋಷವಾಯಿತು. ಆಡಳಿತಾರೂಢ ಪಕ್ಷದ ಪ್ರಣಾಳಿಕೆಗೆ ಮನಸೋತು ಯುವಕರೇ ಹೆಚ್ಚಾಗಿ ಆ ಪಕ್ಷಕ್ಕೆ ಮತ ಹಾಕಿದರು. ಆದರೆ ಸರ್ಕಾರದ ಸೇವೆ ಮಾಡಬೇಕೆಂಬ ಅವರ ಆಸೆಗೆ ಪುಷ್ಟಿ ದೊರೆತಿಲ್ಲ ಎಂಬುದು ವರುಣ್ ಅವರ ಮಾತುಗಳಲ್ಲಿ ವ್ಯಕ್ತವಾಗಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಕಾನೂನು ತೊಡಕುಗಳಿವೆಯೇ? ಖಾಸಗೀಕರಣ ಮಾಡುವ ಉದ್ದೇಶವಿದೆಯೇ ಅಥವಾ ಅಷ್ಟು ಜನರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲವೇ?

- ಮಲ್ಲತ್ತಹಳ್ಳಿ ಡಾ. ಎಚ್.ತುಕಾರಾಂ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.