ADVERTISEMENT

ವಿದ್ಯಾರ್ಥಿ ಸಂಘಟನೆಗಳೆಲ್ಲಿ?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 19:30 IST
Last Updated 10 ಸೆಪ್ಟೆಂಬರ್ 2018, 19:30 IST

ವಿದ್ಯಾರ್ಥಿ ಸಂಘಟನೆಗಳು ತಮ್ಮ ಉದ್ದೇಶವನ್ನೇ ಮರೆತಂತೆ ಕಾಣಿಸುತ್ತಿದೆ. ತಾವು ಮಾಡಲೇಬೇಕಾದ ಕಾರ್ಯಗಳನ್ನು ಮರೆತಿರುವ ಈ ಸಂಘಟನೆಗಳು ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತ ಯುವ ಶಕ್ತಿಯನ್ನು ಪೋಲು ಮಾಡುತ್ತಿವೆ. ಚಟುವಟಿಕೆಯಿಂದ ಇರುವ ಒಂದೆರಡು ಸಂಘಟನೆಗಳು ರಾಜಕೀಯ ಪಕ್ಷಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿವೆ. ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ... ಎಂದೆಲ್ಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಂದ ಹತ್ತು ಹಲವು ಶುಲ್ಕಗಳನ್ನು ವಸೂಲು ಮಾಡುತ್ತ, ವರ್ಷದಿಂದ ವರ್ಷಕ್ಕೆ ಅವನ್ನು ಹೆಚ್ಚಿಸುತ್ತಲೇ ಇವೆ. ಇದರಿಂದಾಗಿ ಉನ್ನತ ಶಿಕ್ಷಣ ದುಬಾರಿಯಾಗಿ, ಬಡ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅನ್ಯಾಯದ ವಿರುದ್ಧ ಹೋರಾಡಬೇಕಾಗಿದ್ದ ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಕ್ಯಾಂಪಸ್‌ಗಳಲ್ಲಿ ಧರ್ಮ ಹಾಗೂ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ಸಹ ಇಂಥ ಸಂಘಟನೆಗಳನ್ನು ತಮಗೆ ಬೇಕಾದಾಗ, ಬೇಕಾದಂತೆ ಬಳಸಿಕೊಳ್ಳುತ್ತಿವೆ.

ಒಳ್ಳೆಯ ಶೈಕ್ಷಣಿಕ ವಾತಾವರಣವನ್ನು ಬಯಸುವ ಯುವ ಸಮುದಾಯವು ತುರ್ತಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ. ಪೂರ್ವಗ್ರಹಗಳಿಲ್ಲದ, ಸರಿಯಾದ ಉದ್ದೇಶಗಳನ್ನು ಹೊಂದಿದ ಹೊಸ ವಿದ್ಯಾರ್ಥಿ ಸಂಘಟನೆಯನ್ನು ಕಟ್ಟಲೇಬೇಕಾದ ತುರ್ತಿದೆ.

ಪ್ರಣಾಮ್ ಶೆಟ್ಟಿ, ಕಲ್ಲಡ್ಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.