ADVERTISEMENT

ಝೀರೊ ಟ್ರಾಫಿಕ್‌: ಬೇಕಿದೆ ಬ್ರೇಕ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 17:27 IST
Last Updated 5 ಆಗಸ್ಟ್ 2021, 17:27 IST

ವೈದ್ಯಕೀಯ ಸೇವೆ ಸೇರಿದಂತೆ ತೀರಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೀವ ಉಳಿಸುವುದಕ್ಕೆ ಅಥವಾ
ಗಣ್ಯಾತಿಗಣ್ಯರ ಆಗಮನದ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಝೀರೊ ಟ್ರಾಫಿಕ್ (ತಡೆರಹಿತ ಸಂಚಾರ) ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತ ಬರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ದುರ್ಬಳಕೆಯಾಗುವ ಮೂಲಕ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಪ್ರಮಾಣವಚನ ಸ್ವೀಕರಿಸುವುದಕ್ಕೆ ವಿಮಾನ ಏರಿ ಬಂದ ಶಾಸಕಿ ಶಶಿಕಲಾ ಜೊಲ್ಲೆ ಅವರನ್ನು ರಾಜಭವನಕ್ಕೆ ಕರೆತರುವುದಕ್ಕೆ ಇಡೀ ಪೊಲೀಸ್‌ ವ್ಯವಸ್ಥೆಯನ್ನು ಯುದ್ಧೋಪಾದಿಯಲ್ಲಿ ಸಜ್ಜುಗೊಳಿಸಿದ ಮುಖ್ಯಮಂತ್ರಿ ಅವರ ನಡೆ ಎಷ್ಟರಮಟ್ಟಿಗೆ ಸರಿ? ಇದು ಅಧಿಕಾರದ ದುರ್ಬಳಕೆ ಎನ್ನದೆ ವಿಧಿಯಿಲ್ಲ. ಜೊಲ್ಲೆ ಅವರು ತಡವಾಗಿ ಬಂದು ರಾಜ್ಯಪಾಲರ ಮುಂದೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಿರಲಿಲ್ಲವೇ? ಜನರನ್ನು ಹೈರಾಣಾಗಿಸಿ ಝೀರೊ ಟ್ರಾಫಿಕ್‌ ಕಲ್ಪಿಸಿದ್ದರ ಹಿಂದೆ ನಾಡಿನ ಹಿತ ಇತ್ತೇ?

ಕಾರಿನಿಂದ ಇಳಿದು ಓಡೋಡಿ ಬಂದು ಅಷ್ಟೊಂದು ಅವಸರದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿರು ವುದಕ್ಕೆ ಬಹುಶಃ ಕೊನೇ ಗಳಿಗೆಯಲ್ಲಿ ಪಟ್ಟಿ ಬದಲಾಗಬಹುದು ಎಂಬ ಅಳುಕು ಕಾಡಿರಲೂಬಹುದು ಅಥವಾ ಮುಖ್ಯಮಂತ್ರಿಗೆ ಈ ವಿಷಯದಲ್ಲಿ ಮೇಲಿನವರ ಒತ್ತಡವೂ ಇರಬಹುದು. ಕೆಂಪುಗೂಟದ ಕಾರಿನ ವಿಚಾರದಲ್ಲಿ ಈ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಈಗ ಝೀರೊ ಟ್ರಾಫಿಕ್‌ ವಿಚಾರದಲ್ಲೂ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ ಎನಿಸುತ್ತದೆ.

-ನಾರಾಯಣರಾವ ಕುಲಕರ್ಣಿ,ಹಿರೇಅರಳಿಹಳ್ಳಿ, ಯಲಬುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.