ADVERTISEMENT

ಮತದಾರರೂ ಪ್ರಾಮಾಣಿಕರಾಗಿರಲಿ..!

ಡಿ.ಬಿ, ನಾಗರಾಜ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST

ವಿಜಯಪುರ: ‘ಪ್ರಾಮಾಣಿಕತೆ ಎಂಬುದು ರಾಜಕಾರಣಿಗಳಲ್ಲಷ್ಟೇ ಅಲ್ಲ ಮತದಾರರಲ್ಲೂ ಇರಬೇಕು. ಎಲ್ಲದಕ್ಕೂ ರಾಜಕಾರಣಿಗಳನ್ನು ಮಾತ್ರ ದೂಷಿಸಬಾರದು!’

‘ವಿಜಯಪುರ ಮಹಾನಗರ ಪಾಲಿಕೆಯ ಆಡಳಿತ ಜಡ್ಡುಗಟ್ಟಿದೆಯಲ್ಲಾ’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗರಂ ಆಗಿ ಉತ್ತರಿಸಿದ ಪರಿಯಿದು.

‘ನಾಗರಿಕರು ಆಮಿಷಕ್ಕೆ ಬಲಿಯಾಗಿ ಮತ ಹಾಕ್ತಾರೆ. ಬಳಿಕ ಚುನಾಯಿತ ಜನಪ್ರತಿನಿಧಿಯನ್ನು ನೇರವಾಗಿ ಪ್ರಶ್ನಿಸಲಾಗದೆ ವಿಲವಿಲ ಒದ್ದಾಡಿ ಹೀಗೆಲ್ಲ ಟೀಕೆ ಮಾಡ್ಕೊಂಡು ಓಡಾಡ್ತಾರೆ. ಆಯ್ಕೆಯಾದ ಪ್ರತಿನಿಧಿ ತನ್ನ ಸೋದರರಿಗೆ, ಸಂಬಂಧಿಕರಿಗೆ ಗುತ್ತಿಗೆ ನೀಡಿ ಲೂಟಿ ಮಾಡ್ತಾನೆ ಅಷ್ಟೇ...

ADVERTISEMENT

‘ಉತ್ತರದಾಯಿತ್ವ ಜನಪ್ರತಿನಿಧಿಗೆ ಇರುವಷ್ಟೇ ಮತದಾ
ರರಿಗೂ ಇರಬೇಕು. ಮತದಾರ ಪ್ರಾಮಾಣಿಕನಾಗಿದ್ದರೆ ಇಂಥ ಸಮಸ್ಯೆ ಬರುವುದಿಲ್ಲ. ನೀವು ಇಂಥ ಪ್ರಶ್ನೆಯನ್ನೂ ಕೇಳಲ್ಲ’ ಎಂದು ಯತ್ನಾಳ ಖಡಕ್‌ ಆಗಿ ಉತ್ತರ ನೀಡಿದ್ದಕ್ಕೆ, ಪತ್ರಕರ್ತರು ಹೌದೌದು ಎಂದು ತಲೆಯಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.