ADVERTISEMENT

ಶಾಸಕರು ಏನು ಹೇಳುತ್ತಾರೆ?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

`ಆರು ವರ್ಷಗಳ ಹಿಂದೆ ರೂಪಿಸಿರುವ ಮಾನದಂಡದ ಪ್ರಕಾರ ಅನುದಾನ ಹಂಚಿಕೆ ಮಾಡುವುದು ಸರಿಯಲ್ಲ, ಸಿಮೆಂಟ್, ಮರಳು ದರ ಹೆಚ್ಚಾಗಿದೆ. ಆದ್ದರಿಂದ 2001ರ ಬದಲಿಗೆ, 2011ರ ಜನಗಣತಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಬೇಕು.

ಒಬ್ಬ ವ್ಯಕ್ತಿಗೆ ಐದು ಸಾವಿರ ರೂಪಾಯಿ ಪ್ರಕಾರ ಗ್ರಾಮದ ಒಟ್ಟು ಜನಸಂಖ್ಯೆಯನ್ನು ಆಧರಿಸಿ ಅನುದಾನ ನಿಗದಿ ಮಾಡಬೇಕು. ಆಗ ಮಾತ್ರ ಶೇ 100ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಲು ಸಾಧ್ಯ~

`ಮೊದಲ ಹಂತದಲ್ಲಿ ನನ್ನ ಕ್ಷೇತ್ರದ ಕಾಡ್ಲ, ಮುದೋಳ ಗ್ರಾಮದಲ್ಲಿ ಈ ಯೋಜನೆ ಅನುಷ್ಠಾನಗೊಂಡಿತ್ತು. ಸರ್ಕಾರದ ಅನುದಾನದಲ್ಲಿ ಶೇ 50ರಿಂದ 60ರಷ್ಟು ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಕೊನೆಗೆ ಜಲಾನಯನ ಯೋಜನೆಯ ಅನುದಾನವನ್ನು ಬಳಸಿಕೊಂಡು ಸುವರ್ಣ ಗ್ರಾಮ ಯೋಜನೆಯನ್ನು ಪೂರ್ಣಗೊಳಿಸಲಾಯಿತು~ 
 ಡಾ.ಶರಣ ಪ್ರಕಾಶ್ ಪಾಟೀಲ್, ಶಾಸಕರು, ಸೇಡಂ

`ಯೋಜನೆ ಒಳ್ಳೆಯದು. ಆದರೆ ಸರ್ಕಾರ ನಿಗದಿಪಡಿಸಿರುವ ಹಣ ಸಾಲದು, ಹೀಗಾಗಿ ಶೇ 30ರಿಂದ 40ರಷ್ಟು ಕೆಲಸ ಬಾಕಿ ಉಳಿಯುತ್ತಿದೆ. ಜನರ ಸಹಕಾರ ಸಿಗದ ಕಾರಣ ಕೆಲವೆಡೆ ಅಂಗನವಾಡಿ ಕೇಂದ್ರ, ಸಮುದಾಯ ಭವನ ನಿರ್ಮಾಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ~
 ವೆಂಕಟರಾವ್ ನಾಡಗೌಡ, ಶಾಸಕರು ಸಿಂಧನೂರು
  
`ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಒಂದು ಗ್ರಾಮದ ಅಭಿವೃದ್ಧಿಗೆ ಕನಿಷ್ಠ 70ರಿಂದ 80 ಲಕ್ಷ ರೂಪಾಯಿ ಅನುದಾನಬೇಕು. ಕಡಿಮೆ ಅನುದಾನದಿಂದಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಗುತ್ತಿಲ್ಲ. ಅಲ್ಲದೆ ಸಕಾಲಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ~
ಬಾಗೇಪಲ್ಲಿ ಶಾಸಕ ಎನ್.ಸಂಪಂಗಿ 
 
`ಮೊದಲ ಹಂತದ ಕಾಮಗಾರಿಗಳೇ ಇನ್ನೂ ಪೂರ್ಣಗೊಂಡಿಲ್ಲ. ನನ್ನ ಕ್ಷೇತ್ರದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುವ 13 ಗ್ರಾಮಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಹಣ ಬಿಡುಗಡೆಯಾಗಿಲ್ಲ~

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.