ADVERTISEMENT

ಔದಾರ್ಯ ಅಲ್ಲ ಅನಿವಾರ್ಯ

ಸಹನಾ ಕಾಂತಬೈಲು
Published 10 ಮಾರ್ಚ್ 2013, 19:59 IST
Last Updated 10 ಮಾರ್ಚ್ 2013, 19:59 IST

ಪ. ರಾಮಕಷ್ಣ ಶಾಸ್ತ್ರಿ ಅವರು  ಕರ್ಮದಿಂದ ಜಾತಿ (ಜಾತಿ ಸಂವಾದ, ಮಾರ್ಚ್ 04) ಎಂಬ ಬರಹದಲ್ಲಿ ಬ್ರಾಹ್ಮಣತ್ವದ ಬಗ್ಗೆ ಕೂಲಂಕಷವಾಗಿ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಬ್ರಾಹ್ಮಣರು ಬೇರೆ ಜಾತಿಯ ಹುಡುಗಿಯರಿಗೆ ಬದುಕು ಕೊಡುತ್ತಿದ್ದಾರೆ. ಇಂಥ ಔದಾರ್ಯಪರ ನಡತೆ ಬೇರೆ ಯಾವ ಜಾತಿಯಲ್ಲೂ ಕಾಣಸಿಗದು ಎಂದಿದ್ದಾರೆ. ಆದರೆ ವಾಸ್ತವ ಹಾಗಿಲ್ಲ.

ಇದು ಬ್ರಾಹ್ಮಣರ ಔದಾರ್ಯಪರ ನಡತೆ ಖಂಡಿತ ಅಲ್ಲ. ಇದು ಅವರಿಗೆ ಅನಿವಾರ್ಯ. ಏಕೆಂದರೆ ಇಂದು ಬ್ರಾಹ್ಮಣ ವಧುಗಳ ಸಂಖ್ಯೆ ತೀರಾ ಕಡಿಮೆ ಇದೆ. ಕೃಷಿಕ, ಪುರೋಹಿತ, ಅಡುಗೆ ವೃತ್ತಿಗಳಲ್ಲಿ ತೊಡಗಿಕೊಂಡಿರುವವರಿಗೆ ವಧುಗಳೇ ಇಲ್ಲ. ಬ್ರಾಹ್ಮಣ ಕನ್ಯೆಯನ್ನು ಕಾದರೆ ಅವರು ಜೀವನಪೂರ್ತಿ ಬ್ರಹ್ಮಚಾರಿಗಳಾಗಿ ಉಳಿಯಬೇಕಾಗುತ್ತದೆ. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಸುಲಭವಾಗಿ ಸಿಗುವ ಬೇರೆ ಜಾತಿಯ ವಧುಗಳನ್ನು ಮದುವೆಯಾಗುವುದು.

ಬದುಕು ಕೊಡುವವರಾದರೆ ಅನ್ಯ ಜಾತಿಯ ಅಂಗಹೀನ ಹುಡುಗಿಯನ್ನು ಮದುವೆಯಾಗಿ ಔದಾರ್ಯ ಮೆರೆಯಬಹುದಲ್ಲ? ಅದಕ್ಕೆ ಅವರು ತಯಾರು ಇದ್ದಾರೆಯೇ? ನನ್ನ ತಮ್ಮನಿಗೆ 35 ವರ್ಷ ದಾಟಿದೆ. ವೃತ್ತಿಯಲ್ಲಿ ವಕೀಲ. ಸ್ಫುರದ್ರೂಪಿ. ಕೆಟ್ಟ ಚಟಗಳಿಲ್ಲ. ಆದರೂ ಅವನಿಗೆ ಅವನ (ಬ್ರಾಹ್ಮಣ) ಜಾತಿಯಲ್ಲಿ ಹುಡುಗಿ ಸಿಕ್ಕಿಲ್ಲ. ಕಾದು ಕಾದು ಸುಸ್ತಾಗಿ ಈಗ ಅನಿವಾರ್ಯವಾಗಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.