ADVERTISEMENT

ಅಮ್ಮ ನನ್ನ ಜಡ್ಜ್‌

ವಿದ್ಯಾಶ್ರೀ ಎಸ್.
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಅಮ್ಮ ನನ್ನ ಜಡ್ಜ್‌
ಅಮ್ಮ ನನ್ನ ಜಡ್ಜ್‌   

* ನಟನಾ ನಂಟು ಬೆಳೆದಿದ್ದು ಹೇಗೆ?
ತಾಯಿಯ ತಂದೆ (ತಾತಾ) ರಂಗಭೂಮಿ ಕಲಾವಿದರು. ನಾಟಕ ಕಂಪೆನಿ ನಡೆಸುತ್ತಿದ್ದರು. ಹೀಗಾಗಿ ಅಮ್ಮನಿಗೆ ನನ್ನನ್ನೂ ಕಲಾವಿದೆಯಾಗಿ ನೋಡಬೇಕೆನ್ನುವ ಆಸೆ. ಪಿಯುಸಿ ಓದುತ್ತಿದ್ದಾಗ ಸ್ನೇಹಿತೆಯೊಬ್ಬರ ಮುಖಾಂತರ ಮಾಸ್ಟರ್ ಆನಂದ್ ನಿರ್ದೇಶನದ ಪಡುವಾರಳ್ಳಿ ಪಡ್ಡೆಗಳು ಹಾಸ್ಯ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. 

* ನಟಿಸಿರುವ ಧಾರಾವಾಹಿಗಳು...
ಗುರುರಾಘವೇಂದ್ರ ವೈಭವ, ಕಂಜೂಸ್ ಕಮಂಗಿರಾಯ, ಕಾರ್ತಿಕ ದೀಪ, ದೀಪವು ನಿನ್ನದೇ, ಅಗ್ನಿಸಾಕ್ಷಿ, ಪತ್ತೆದಾರಿ ಪ್ರತಿಭಾ.

* ಯಾರೊಂದಿಗೆ ಡೇಟಿಂಗ್‌ ಮಾಡಲು ಇಷ್ಟ?
ಪುನೀತ್‌ ರಾಜ್‌ಕುಮಾರ್‌

* ಪದೇಪದೆ ನೋಡಬೇಕೆನಿಸುವ ಸಿನಿಮಾ...
ನೋ ಡೌಟ್, ಅದು ‘ರಾಜಕುಮಾರ’.

* ಮರುಭೂಮಿಯಲ್ಲಿಯೂ ಬೇಕೆನಿಸುವ ವಸ್ತು...
ತಿನ್ನಲು ಇರದಿದ್ದರೂ ಪರವಾಗಿಲ್ಲ. ನನಗೆ ಸೆಲ್ಫಿ ಕ್ಲಿಕಿಸುವ ಕ್ರೇಜ್‌. ಹಾಗಾಗಿ ಮೊಬೈಲ್‌ ಮತ್ತು ಲಿಪ್‌ಸ್ಟಿಕ್‌ ಬೇಕೇ ಬೇಕು.

* ಮೊದಲ ಸಂಬಳ ಏನು ಮಾಡಿದ್ರಿ?
ಅಮ್ಮನಿಗೆ ಕೊಟ್ಟಿದ್ದೆ. ಅವರು ಏನು ಮಾಡಿದ್ರೋ ಗೊತ್ತಿಲ್ಲ.

ADVERTISEMENT

* ಯಾವ ಸ್ಥಳ ಇಷ್ಟ?
ನಾನು ರಾಘವೇಂದ್ರ ಸ್ವಾಮಿ ಭಕ್ತೆ. ಹಾಗಾಗಿ ಯಾವಾಗಲೂ ಮಂತ್ರಾಲಯಕ್ಕೆ ಹೋಗುತ್ತೇನೆ.

* ಹೇಳಿಕೆ ಮಾತನ್ನು ಕೇಳಿ ಮೋಸ ಹೋಗಿದ್ದು ಇದೆಯಾ?
ಅಮ್ಮನ ಮಾತನ್ನು ಬಿಟ್ಟು, ಬೇರೆಯವರು ಹೇಳುವ ಮಾತನ್ನು ನಂಬುವುದಿಲ್ಲ. ಅಮ್ಮ ಬೇರೆಯವರನ್ನು ಸರಿಯಾಗಿಯೇ ಜಡ್ಜ್‌ ಮಾಡುವುದರಿಂದ ಮೋಸ ಹೋಗಿದ್ದು ಇಲ್ಲ. ಹಾಗಾಗಿ ಅಮ್ಮನೇ ನನ್ನ ಜಡ್ಜ್‌.

* ನಿಮಗೆ ಕೋಪ ಜಾಸ್ತೀನಾ?
ತುಂಬಾ ಕೋಪ ಬರುತ್ತದೆ. ಯಾರು ಎದುರಿಗೆ ಇರುತ್ತಾರೆ ಎನ್ನುವುದನ್ನೂ ನೋಡದೆ ಕಿರುಚಾಡಿ ಬಿಡುತ್ತೇನೆ.

* ನಿಮಗೆ ನೆನಪಿರುವ ತಮಾಷೆ ಸನ್ನಿವೇಶ
ಮೊದಲ ಧಾರಾವಾಹಿಯ ಆಡಿಷನ್‌ಗೆ ಹೋಗುವಾಗ ಫೋಟೊ ತೆಗೆದುಕೊಂಡು ಹೋಗಬೇಕಿತ್ತು. ಆಗ ನಾನಿನ್ನೂ ಪಿಯುಸಿ ಯಲ್ಲಿದ್ದೆ. ಆಗೆಲ್ಲ ಪಾಸ್‌ಪೋರ್ಟ್‌ ಸೈಜ್‌ ಫೋಟೊ ಬಿಟ್ಟರೆ ಬೇರೆ ಇರಲಿಲ್ಲ. ಹಾಗಾಗಿ ಅದನ್ನೇ ತೆಗೆದುಕೊಂಡು ಹೋಗಿದ್ದೆ. ಅಲ್ಲಿದ್ದವರೆಲ್ಲ ಜೋರಾಗಿ ನಕ್ಕುಬಿಟ್ಟಿದ್ದರು. 

* ನೀವು ಜಗಳಗಂಟಿನಾ?
ಜಗಳ ಆಡುವುದು ಕಡಿಮೆ. ನಾನು ಹೆಚ್ಚು ಮಾತನಾಡುವುದಿಲ್ಲ. ಯಾರಾದರೂ ಗದರಿದರೆ ಅತ್ತು ಬಿಡುತ್ತೇನೆ. ಹಾಗೊಮ್ಮೆ ತುಂಬಾ ಹತ್ತಿರವಾದವರ ಬಳಿ ಜಗಳವಾಡಿದರೂ ನಾನೇ ಹೋಗಿ ಕ್ಷಮೆ ಕೇಳುತ್ತೇನೆ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.