ADVERTISEMENT

ಆಕಾಶ ಮುಟ್ಟಿದ ಟೆಡ್ಡಿಬೇರ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST
ಆಕಾಶ ಮುಟ್ಟಿದ ಟೆಡ್ಡಿಬೇರ್‌
ಆಕಾಶ ಮುಟ್ಟಿದ ಟೆಡ್ಡಿಬೇರ್‌   

ಟೆಡ್ಡಿಬೇರ್‌ವೊಂದು ಭೂಮಿಯಿಂದ 1 ಲಕ್ಷ ಅಡಿಗಿಂತಲೂ ಹೆಚ್ಚು ಎತ್ತರ ಹಾರಿ ಬಾಹ್ಯಾಕಾಶ ತಲುಪಿದ ಘಟನೆ ಯುರೋಪ್‌ನಲ್ಲಿ ನಡೆದಿದೆ.

ರಾಫಾ ಎಂಬ ಹೆಸರಿನ ಟೆಡ್ಡಿಬೇರ್‌ ಬಾಹ್ಯಾಕಾಶ ತಲುಪಿದ್ದು, ಈ ಟೆಡ್ಡಿಬೇರ್‌ ಒಳಗೆ ಹೀಲಿಯಂ ತುಂಬಿಸಿ, ಯುರೋಪ್‌ನ ಬೋಲೆ ಹಿಲ್‌ನಲ್ಲಿನ ಕಿಂಗ್ಸ್‌ ರೋಚೆಸ್ಟರ್‌ ಪ್ರಿಪರೇಟರಿ ಶಾಲೆಯ ಮಕ್ಕಳು ಈ ಪ್ರಯೋಗ ಮಾಡಿದ್ದಾರೆ. ಇದಕ್ಕೆ ‘ಆಪರೇಷನ್‌ ಕಾಸ್ಮಿಕ್‌ ಡಸ್ಟ್‌’ ಎಂದು ಹೆಸರಿಡಲಾಗಿದೆ.

ಈ ಟೆಡ್ಡಿಬೇರ್‌ ಭೂಮೇಲ್ಮೈನ ಎರಡನೇ ಪದರದ ವಾಯುಮಂಡಲ ತಲುಪಿ, ಅಲ್ಲಿ ಸುಮಾರು 29 ಕಿ.ಮೀ ಹಾರಾಟ ನಡೆಸಿದೆ. ಅದಕ್ಕೆ ಕಟ್ಟಿದ್ದ ಕ್ಯಾಮೆರಾ ಈ ಎಲ್ಲವನ್ನು ಚಿತ್ರೀಕರಿಸಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.