ADVERTISEMENT

ಉಗುರಿನಲ್ಲಿ ರಂಗೋಲಿ ಹಾಕೋ ಕಾಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 19:30 IST
Last Updated 20 ಏಪ್ರಿಲ್ 2018, 19:30 IST
ಉಗುರಿನಲ್ಲಿ ರಂಗೋಲಿ ಹಾಕೋ ಕಾಲ
ಉಗುರಿನಲ್ಲಿ ರಂಗೋಲಿ ಹಾಕೋ ಕಾಲ   

ಚಿತ್ರಶ್ರೀ ಹರ್ಷ

ಮಕ್ಕಳಿಗಂತೂ ಬಣ್ಣಗಳದ್ದೇ ಲೋಕ. ಬೇಸಿಗೆ ರಜೆಯಲ್ಲಿ ಮಜಾ ಮಾಡುತ್ತಿರುವ ಮಕ್ಕಳಿಗೆ ಫ್ಯಾಷನ್ ಲೋಕದ ಹೊಸ ಆಕರ್ಷಣೆ ಈ ‘ಕಿಡ್ಸ್ 3ಡಿ ನೈಲ್ ಆರ್ಟ್!’

ನೈಲ್ ಪಾಲಿಷ್‌ನ ಮೋಹಕ್ಕೆ ವಯೋಮಿತಿಯ ಭೇದವಿಲ್ಲ. ಕೇವಲ ಬಣ್ಣ ಮಾತ್ರವಲ್ಲ, ಈ ಪುಟಾಣಿಗಳ ಕೈ ಉಗುರುಗಳ ಮೇಲೆ ಮಿಕ್ಕಿಮೌಸ್, ಮಿನಿ ಮೌಸ್, ಮರ್ಮೇಡ್, ನ್ಯಾನೊ ಫಿಶ್, ಹೀಗೆ ಹತ್ತು ಹಲವು ಕಾರ್ಟೂನ್ ಪಾತ್ರಗಳನ್ನು ಸೂಕ್ಷ್ಮವಾಗಿ ಮೂಡಿಸಲಾತ್ತದೆ. ಹೂ, ಹಣ್ಣು, ಪ್ರಕೃತಿ, ಬಾಲ್, ಪಾಂಡಾ, ನವಿಲು ಹೀಗೆ ವಿವಿಧ ಚಿತ್ತಾರಗಳು ಕೈ ಉಗುರು ಅಲಂಕರಿಸುತ್ತವೆ. ಮಕ್ಕಳಿಗೆಂದೇ ಹಲವು ವೆರೈಟಿಗಳಲ್ಲಿ ನೈಲ್ ಆರ್ಟ್ ಸಿದ್ಧಗೊಳಿಸಬಹುದು.

ADVERTISEMENT

ತ್ರೀಡಿ ನೇಲ್ ಆರ್ಟ್

3ಡಿ ಪ್ರಿಯ ಯುಗಕ್ಕೆ ಮ್ಯಾಚ್ ಮಾಡಲು ಬಂದಿವೆ 3ಡಿ ನೈಲ್ ಆರ್ಟ್. ಪುಟ್ಟ ಪೋರಿಯರು ಮಾರುಕಟ್ಟೆಯಲ್ಲಿ ಸಿಗುವ 3ಡಿ ಮಿನಿಯೇಚರ್ ಕಾರ್ಟೂನ್ ಸ್ಟಿಕರ್‌ಗಳನ್ನು ನೇಲ್ ಪಾಲಿಷ್ ಮೇಲೆ ಅಂಟಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಮಿಕ್ಕಿ-ಮಿನಿ, ಹಳದಿ-ನೀಲಿ ಬಣ್ಣದ ಮಿನಿಯನ್‌ಗಳು, ವಿನ್ನಿ ಫೂ, ಪಾಂಡಾ, ಸಿಂಡ್ರೆಲಾ, ಹೀಗೆ ಹಲವು ವೆರೈಟಿಗಳಲ್ಲಿ 3ಡಿ ಮಿನಿಯೇಚರ್ ನೇಲ್ ಆರ್ಟ್ ರಚಿಸಿಕೊಳ್ಳಬಹುದು. 3ಡಿ ನೇಲ್ ಆರ್ಟ್‌ನಲ್ಲಿ ಕೈ ಉಗುರುಗಳ ಮೇಲೆ ಬಣ್ಣದ ಗುಲಾಬಿ, ಲಿಲ್ಲಿ,  ಕಮಲ, ಸೂರ್ಯಕಾಂತಿ ಹೂಗಳೂ ಅರಳುತ್ತವೆ.  ಬಾರ್ಬೀ, ಸ್ಮೈಲೀ, ಮಿನಿಯನ್, ಮಿನೀ ಮೌಸ್, ಚೋಟಾ ಭೀಮ್, ವಿನ್ನಿ ಫೂ.. ಡಿಸ್ನಿ ಪ್ರಿಂಸೆಸ್ ಗಳು ಪುಟ್ಟ ರಾಜಕುಮಾರಿಯರ ಕೈ ಮೇಲೆ ನಲಿದಾಡುತ್ತವೆ.

ಸಮ್ಮರ್ ಸ್ಟೈಲ್ ನೇಲ್ ಆರ್ಟ್

ಬಿರು ಬೇಸಿಗೆಗೆ ತಂಪಾದ ಟ್ರಾಪಿಕಲ್ ಸಮ್ಮರ್ ಸ್ಟೈಲ್ ನೇಲ್ ಆರ್ಟ್ ಸದ್ಯ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ. ಕಲ್ಲಂಗಡಿ, ಕಿತ್ತಳೆ, ನಿಂಬೆ, ಸ್ಟ್ರಾಬೆರಿಗಳನ್ನು ನೇಲ್ ಪೇಂಟ್ ಮೂಲಕ ಉಗುರುಗಳ ಮೇಲೆ ರಚಿಸಲಾಗುತ್ತದೆ. ವಸಂತಋತುವನ್ನು ಸಂಭ್ರಮಿಸುವ ಬಣ್ಣದ ಚಿಟ್ಟೆ, ಹೂ, ಸೂರ್ಯ, ಸೂರ್ಯಾಸ್ತದ ಚಿತ್ರಗಳನ್ನು ಸಣ್ಣ ಬ್ರಶ್‌ಗಳ ಮೂಲಕ ಬಿಡಿಸಬಹುದು. ಇದಲ್ಲದೇ  ಸ್ಟ್ರಾಬೆರಿ, ವೆನಿಲ್ಲಾ, ಪಿಸ್ತಾ, ಚಾಕಲೇಟ್, ಕೋನ್ ಐಸ್ ಕ್ರೀಮ್, ಕ್ಯಾಂಡಿ, ಕಪ್ ಕೇಕ್‌ಗಳ ನೇಲ್‌ ಆರ್ಟ್‌ 2018ರ ಹೊಸ ಟ್ರೆಂಡ್. ಶಾಲೆಗೆ ರಜೆ ಇದ್ದರೂ ಮಕ್ಕಳು ಶಾಲೆಯನ್ನು ಮರೆಯುವುದಿಲ್ಲ. ಶಾಲೆ ಮತ್ತು ಮಕ್ಕಳ ಸಂಬಂಧ ಸಾರುವ ಪೆನ್ಸಿಲ್‌, ಬ್ಲಾಕ್ ಬೋರ್ಡ್, ಬುಕ್, ಎ,ಬಿ,ಸಿ ಅಕ್ಷರಗಳ ನೈಲ್ ಆರ್ಟ್ ಕೂಡಾ ಈಗ ಅಷ್ಟೇ ಫೇಮಸ್ ಆಗಿದೆ.

ಮಕ್ಕಳಿಗೆ ನೇಲ್‌ ಆರ್ಟ್‌ ಮಾಡುತ್ತಿದ್ದೀರಾ?

* ಚರ್ಮಕ್ಕೆ ಹಾನಿಯಾಗದಂತೆ ಜಾಗರೂಕತೆ ವಹಿಸಬೇಕು

* ಕಳಪೆ ದರ್ಜೆಯ, ಎಕ್ಸ್‌ಪೈರಿ ಡೇಟ್ ಮೀರಿರುವ ನೇಲ್ ಪೇಂಟ್ ಬಳಸಬೇಡಿ

* ನೇಲ್ ಆರ್ಟ್ ಮಾಡುವಾಗ ಮಕ್ಕಳು ನವೆ ಅಥವಾ ಚರ್ಮದ ಉರಿ ಎಂದರೆ ತಕ್ಷಣ ತಣ್ಣೀರಿನಲ್ಲಿ ಕೈ ತೊಳೆಯಿರಿ

* ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಠಿತ ಕಂಪನಿಗಳ ನೇಲ್ ಪಾಲಿಷ್‌ಗಳನ್ನು ಮಾತ್ರ ಬಳಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.