ADVERTISEMENT

ಕುಡಿದರೆ ಮಾತನಾಡುವುದು ಸುಲಭ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಕುಡಿದರೆ ಮಾತನಾಡುವುದು ಸುಲಭ
ಕುಡಿದರೆ ಮಾತನಾಡುವುದು ಸುಲಭ   

ಹೊಸ ಭಾಷೆ ಕಲಿಯಬೇಕಾ? ನಾಲಿಗೆ ಸರಿಯಾಗಿ ಹೊರಳೋದಿಲ್ವಾ? ಹಾಗಿದ್ರೆ ಒಂಚೂರು ಗುಂಡು ಹಾಕಿ. ಹೀಗೆಂದು ಸಂಶೋಧಕರೇ ಹೇಳುತ್ತಿದ್ದಾರೆ. ಹೊಸ ಭಾಷೆ ಕಲಿಯುವಾಗ ಸ್ವಲ್ಪ ಮದ್ಯ ಸೇವಿಸುವುದು ಒಳಿತಂತೆ. ಇದು ನೆದರ್‌ಲೆಂಡ್‌ನ ಮ್ಯಾಸ್ಟ್ರಿಚ್ ವಿಶ್ವವಿದ್ಯಾಲಯದ ಸಂಶೋಧನೆ.

ಜರ್ಮನ್‌ ಭಾಷೆ ಮಾತನಾಡುವ 50 ವಿದ್ಯಾರ್ಥಿಗಳಿಗೆ ಡಚ್‌ ಭಾಷೆಯನ್ನು ಓದಲು ಬರೆಯಲು ಕಲಿಸಲಾಯಿತು. ಈ ಹಂತದಲ್ಲಿ ಪ್ರತಿಯೊಬ್ಬರಿಗೂ ದೇಹದ ತೂಕ, ವಯಸ್ಸು ನೋಡಿಕೊಂಡು ಸ್ವಲ್ಪ ಪ್ರಮಾಣದಲ್ಲಿ ಮದ್ಯವನ್ನು ಕೊಡುತ್ತಿದ್ದರು. ಮದ್ಯ ಸೇವಿಸದ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಮದ್ಯ ಸೇವಿಸಿದ ವಿದ್ಯಾರ್ಥಿಗಳು ಬೇಗ ಭಾಷೆಯನ್ನು ಕಲಿತರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT