ADVERTISEMENT

‘ಚೋಟಾ ನವಾಬ’ನ ಫಿಟ್‌ನೆಸ್‌ ಗುಟ್ಟು

​ಪ್ರಜಾವಾಣಿ ವಾರ್ತೆ
Published 7 ಮೇ 2018, 19:30 IST
Last Updated 7 ಮೇ 2018, 19:30 IST
‘ಚೋಟಾ ನವಾಬ’ನ ಫಿಟ್‌ನೆಸ್‌ ಗುಟ್ಟು
‘ಚೋಟಾ ನವಾಬ’ನ ಫಿಟ್‌ನೆಸ್‌ ಗುಟ್ಟು   

ಬಾಲಿವುಡ್‌ನಲ್ಲಿ ‘ಚೋಟೆ ನವಾಬ್‌’ ಎಂದೇ ಖ್ಯಾತರಾದವರು ನಟ ಸೈಫ್‌ ಆಲಿ ಖಾನ್‌. ‘ಪರಂಪರಾ’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅವರಿಗೆ, ‘ಮೇ ಕಿಲಾಡಿ ತು ಅನಾರಿ’ ಭಾರಿ ಯಶಸ್ಸು ತಂದುಕೊಟ್ಟಿತು.

ಸೈಫ್‌ ವಯಸ್ಸು ಈಗ 48. ಆದರೂ ತಮ್ಮ ಅದ್ಭುತ ಅಭಿನಯ ಹಾಗೂ ಉತ್ತಮ ಮೈಕಟ್ಟಿನಿಂದಾಗಿ ಬಾಲಿವುಡ್‌ನ ಸ್ಟಾರ್‌ ನಟರ ಸಾಲಿನಲ್ಲಿ ಸೈಫ್‌ ಎದ್ದು ಕಾಣುತ್ತಾರೆ. ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡ ಯುವಕನಂತೆಯೇ ಈಗಲೂ ಕಾಣುವುದು ಸೈಫ್‌ ಕಾಪಾಡಿಕೊಂಡು ಫಿಟ್‌ನೆಸ್‌ನಿಂದಾಗಿ. ಹೌದು, ದೇಹದಾರ್ಢ್ಯಕ್ಕಾಗಿ ಸೈಫ್‌ ಪ್ರತಿದಿನ ಕಠಿಣ ಶ್ರಮ ವಹಿಸುತ್ತಾರೆ.

ಪ್ರತಿದಿನ ಎರಡು ಗಂಟೆಗಳ ಕಾಲ ಕಠಿಣವಾಗಿ ಜಿಮ್‌ನಲ್ಲಿ ಕಾಲ ಕಳೆಯುತ್ತಾರೆ. ವ್ಯಾಯಾಮ ಎಂದಿಗೂ ಬೋರಾಗದಂತೆ ತಿಂಗಳಿನಿಂದ ತಿಂಗಳಿಗೆ ಹೊಸ ಹೊಸ ವ್ಯಾಯಾಮ, ವರ್ಕ್‌ಔಟ್‌ಗಳನ್ನು ಅಭ್ಯಾಸ ಮಾಡುತ್ತಾರೆ. ವರ್ಕ್‌ಔಟ್‌ ಆರಂಭಿಸುವ ಮೊದಲು ಸೈಫ್‌ ಸರಳ ವ್ಯಾಯಾಮಗಳನ್ನು ಮಾಡುತ್ತಾರೆ. ಬಳಿಕ ಮಾಂಸಖಂಡಗಳ ಸಡಿಲಿಕೆಗಾಗಿ ಕೆಲ ಸ್ಟ್ರೆಚಿಂಗ್‌ ವ್ಯಾಯಾಮಗಳನ್ನು ಮಾಡುತ್ತಾರೆ. ಅದಾದ ನಂತರ ಸ್ಕಿಪ್ಪಿಂಗ್‌. 

ADVERTISEMENT

ಸೈಫ್‌ ತೂಕ ಕಡಿಮೆ ಮಾಡಿಕೊಳ್ಳಲು ಕಾರ್ಡಿಯೊ ಅಭ್ಯಾಸ ಮಾಡುತ್ತಾರೆ. ದೇಹ ಫಿಟ್‌ ಮಾಡಲು ಸೈಫ್‌ ಕಿಕ್‌ ಬಾಕ್ಸಿಂಗ್‌ ಮಾಡುತ್ತಾರೆ. ಇದಲ್ಲದೇ ಪ್ರತಿದಿನ ಒಂದೊಂದು ಅಂಗಕ್ಕೆ ವ್ಯಾಯಾಮ ಮಾಡುತ್ತಾರೆ. ಒಂದು ದಿನ ಎದೆಭಾಗಕ್ಕೆ, ಮತ್ತೊಂದು ದಿನ ಕೈಗಳಿಗೆ... ಹೀಗೆ ಪ್ರತಿದಿನ ಬೇರೆ ಬೇರೆ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಇನ್ನು ಸೈಫ್‌ ಮಾನಸಿಕ ಆರೋಗ್ಯ ಹಾಗೂ ಒತ್ತಡದಿಂದ ಹೊರಬರಲು ಯೋಗ ಮಾಡುತ್ತಾರೆ.

ಈ ಮೊದಲು ಮಾಂಸಾಹಾರ ಪ್ರಿಯನಾಗಿದ್ದ ಸೈಫ್‌ ಈಗ ವೆಗಾನ್‌ ಡಯೆಟ್‌ ಪ್ರಿಯ. ಈ ಡಯೆಟ್‌ ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ದೇಹದಲ್ಲಿನ ಹಾನಿಕಾರಕ ಅಂಶಗಳನ್ನು ಹೊರಹಾಕಲು ಸಹಕಾರಿ. ಎಷ್ಟೇ ಕೆಲಸದ ಒತ್ತಡ ಇದ್ದರೂ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟವನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಾರೆ. ದಿನಕ್ಕೆ ನಾಲ್ಕು ಬಾರಿ ಆಹಾರ ಸೇವಿಸುವ ಅವರು ಯಾವುದೇ ಕಾರಣಕ್ಕೂ ಸಮಯ ತಪ್ಪಿಸುವುದಿಲ್ಲ. ಸಮತೋಲಿತ ಆಹಾರ ನನ್ನ ಆಯ್ಕೆ ಎಂದು ಹೇಳುವ ಸೈಫ್‌ ಪ್ರೊಟೀನ್‌, ಕಾರ್ಬೋಹೈಡ್ರೇಟ್‌, ಕೊಬ್ಬಿನ ಅಂಶಗಳು ಇರುವ ಆಹಾರಗಳನ್ನು ಸಮಪ್ರಮಾಣದಲ್ಲಿ ಸೇವಿಸುತ್ತಾರೆ.
**
ಹುಟ್ಟುಹಬ್ಬ– ಆಗಸ್ಟ್‌ 16, 1970

ತೂಕ– 81 ಕೆ.ಜಿ

ಎತ್ತರ– 5 ಅಡಿ 8 ಇಂಚು

ಸುತ್ತಳತೆ– 40,30, 14.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.