ADVERTISEMENT

ಡೈರಿ ಮಿಲ್ಕ್‌ ಅಂದ್ರೆ ಪಂಚಪ್ರಾಣ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST
ಸಮಂತಾ ರುತ್ ಪ್ರಭು
ಸಮಂತಾ ರುತ್ ಪ್ರಭು   

ಇತ್ತೀಚೆಗಷ್ಟೇ ನಟ ನಾಗಚೈತನ್ಯ ಜತೆ ಸಪ್ತಪದಿ ತುಳಿದ ಸಮಂತಾ ರುತ್ ಪ್ರಭು ನಟಿಯಾದ ಹಾದಿ ಕುತೂಹಲಕರವಾದದ್ದು. ಸ್ವಂತ ಸಾಮರ್ಥ್ಯ ಮತ್ತು ಪ್ರತಿಭೆಯ ಬಲದಿಂದಲೇ ಅಭಿಮಾನಿಗಳನ್ನು ಗಳಿಸಿದ ಸಮಂತಾ ಬಗ್ಗೆ ಕೆಲ ಅಪರೂಪದ ಮಾಹಿತಿಗಳು ಇಲ್ಲಿವೆ.

*ಸಮಂತಾಗೆ ಯಶೋಧಾ ಎನ್ನುವ ಮತ್ತೊಂದು ಹೆಸರೂ ಇದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಈ ಹೆಸರಿನಿಂದಲೇ ಸಮಂತಾ ಅವರನ್ನು ಕರೆಯುತ್ತಾರೆ. ಈ ಹಿಂದೆ ನಟ ಸಿದ್ಧಾರ್ಥ್ ಸಹ ಸಮಂತಾಳನ್ನು ಯಶು ಎಂದೇ ಕರೆಯುತ್ತಿದ್ದರು.

*ಹಾಲಿವುಡ್‌ನ ಖ್ಯಾತ ನಟಿ ಔಡ್ರೆ ಹೇಪ್‌ಬರ್ನ್ ಅಂದರೆ ಸಮಂತಾಗೆ ತುಂಬಾ ಇಷ್ಟ. ಔಡ್ರೆ ಅಭಿನಯದ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಾರಂತೆ. ಔಡ್ರೆಯ ವೃತ್ತಿಪರತೆಯೂ ಸಮಂತಾಗೆ ಮೆಚ್ಚುಗೆ.

ADVERTISEMENT

*ಸಮಂತಾ ಇಪ್ಪತ್ತರ ಹರೆಯದಲ್ಲಿದ್ದಾಗ ಅವರ ಕುಟುಂಬ ಆರ್ಥಿಕವಾಗಿ ದುಃಸ್ಥಿತಿಯಲ್ಲಿತ್ತು. ಆಗ ಸಮಂತಾ ಬೇರೆಬೇರೆ ಕಡೆ ಪಾರ್ಟ್‌ ಟೈಂ ಕೆಲಸಗಳನ್ನು ಮಾಡುತ್ತಿದ್ದರು. ಅದೇ ಸಮಯದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಆಗ ಸಿನಿಮಾಟೋಗ್ರಾಫರ್ ರವಿವರ್ಮನ್ ಅವರ ಕಣ್ಣಿಗೆ ಬಿದ್ದ ಸಮಂತಾ ಸಿನಿಮಾದಲ್ಲಿ ಅವಕಾಶ ಪಡೆದರು.

*ಕಾಯಿಲೆಪೀಡಿತ ಬಡ ಮಹಿಳೆಯರು ಮತ್ತು ಮಕ್ಕಳ ಸಹಾಯಾರ್ಥವಾಗಿ ಪ್ರತ್ಯೂಷಾ ಎನ್ನುವ ಎನ್‌ಜಿಒವೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ಯುಸಿ ಶೆಡ್ಯೂಲ್‌ಗಳ ನಡುವೆಯೂ ಈ ಎನ್‌ಜಿಒದ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಳುತ್ತಾರೆ.

*ಸಮಂತಾ ಅವರ ತಂದೆ ಆಂಧ್ರದವರು, ತಾಯಿ ಕೇರಳದವರು. ಆದರೆ, ಸಮಂತಾ ತಮ್ಮನ್ನು ತಮಿಳು ಹುಡುಗಿ ಎಂದೇ ಕರೆದುಕೊಳ್ಳಲು ಇಷ್ಟಪಡುತ್ತಾರೆ.

*ಸಮಂತಾ ಈಗ ದಕ್ಷಿಣ ಭಾರತದ ನಂಬರ್ ಒನ್ ನಟಿ. ಶಾಲಾ ದಿನಗಳಲ್ಲೂ ಸಮಂತಾ ಮೊದಲನೇ ಸ್ಥಾನವನ್ನು ಯಾರಿಗೂ ಬಿಟ್ಟುಕೊಟ್ಟಿರಲಿಲ್ಲವಂತೆ.

*ಸಮಂತಾ ದಕ್ಷಿಣ ಭಾರತದವರಾದರೂ ಅವರಿಗೆ ಸುಶಿ ಎನ್ನುವ ಜಪಾನಿನ ಖಾದ್ಯ ಇಷ್ಟ.  ಸಿಹಿ ತಿನಿಸುಗಳು ಕೂಡಾ ಇಷ್ಟವಂತೆ.

*‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ‘ಸುಬ್ಬುಲಕ್ಷ್ಮಿ’ ಎನ್ನುವ ಸಕ್ಕರೆ ಕಾಯಿಲೆಯುಳ್ಳ ನಾಯಕಿ ಪಾತ್ರ ಮಾಡಿದ್ದರು. ಈ ಸಿನಿಮಾ ಮಾಡುವ  ಮುನ್ನವೇ 2013ರಲ್ಲಿ ಸಮಂತಾಗೆ ತಾತ್ಕಾಲಿಕವಾಗಿ ಸಕ್ಕರೆ ಕಾಯಿಲೆ ಬಂದಿತ್ತು. ಹಾಗಾಗಿ, ’ಸುಬ್ಬುಲಕ್ಷ್ಮಿ’ ಪಾತ್ರವನ್ನು ಸುಲಭವಾಗಿ ನಿಭಾಯಿಸಿದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.