ADVERTISEMENT

ಧ್ಯಾನ ಮಾಡುವ ಪಕ್ಷಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಧ್ಯಾನ ಮಾಡುವ ಪಕ್ಷಿ
ಧ್ಯಾನ ಮಾಡುವ ಪಕ್ಷಿ   

ಈ ಪಕ್ಷಿಯ ಹೆಸರೇ ’ಪೂರ್‌ ವಿಲ್’. ಕನ್ನಡಕ್ಕೆ ಅನುವಾದಿಸಿದರೆ ’ಇಚ್ಛಾಶಕ್ತಿ ಇಲ್ಲದ್ದು’ ಎಂದಾಗುತ್ತೆ.

ಅಮೆರಿಕ ಖಂಡದ ಒಣ ತೆರೆದ ಹುಲ್ಲುಗಾವಲು ಮತ್ತು ಕುರುಚಲು ಕಾಡು ಇದರ ಆವಾಸ ಸ್ಥಾನ. ಸಣ್ಣಪುಟ್ಟ ಕೀಟಗಳು ಇದರ ಆಹಾರ. ಚಳಿಗಾಲ ಪೂರ್ತಿ ಅಲುಗಾಡದೇ, ಜಡವಾಗಿರುತ್ತದೆ. ಆಹಾರ ಸೇವಿಸುವ ಆಸಕ್ತಿಯೂ ಇರುವುದಿಲ್ಲ.

ಚಳಿಗಾಲ ಆರಂಭವಾದ ತಕ್ಷಣ ಬೆಚ್ಚಗಿನ ಬಂಡೆಗಳನ್ನು ಹುಡುಕಿಕೊಂಡು ಧ್ಯಾನಸ್ಥವಾಗಿ ಬಿಡುತ್ತದೆ. ಈ ಕಾಲಘಟ್ಟದಲ್ಲಿ ಇದರ ಜೀರ್ಣಕ್ರಿಯೆಯೂ ನಿಧಾನ.

ADVERTISEMENT

ಆದರೆ ಬೇಸಿಗೆಯಲ್ಲಿ ಮಾತ್ರ ಇದು ಬಲುಚುರುಕು. ಸಂತಾನೋತ್ಪತ್ತಿಯನ್ನೂ ಆಗಲೇ ಮಾಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.