ADVERTISEMENT

ರ‌್ಯಾಂಪ್ ಮೇಲೆ ವಸ್ತ್ರವೈಭವ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST
ರ‌್ಯಾಂಪ್ ಮೇಲೆ ವಸ್ತ್ರವೈಭವ
ರ‌್ಯಾಂಪ್ ಮೇಲೆ ವಸ್ತ್ರವೈಭವ   

ರೂಪಂ ಸಿಲ್ಕ್ಸ್‌ನಲ್ಲಿ ಸಂಜೆ ರಂಗೇರಿದಂತಿತ್ತು. ಸಂಗೀತದ ನಿನಾದಕ್ಕೂ ಮೀರಿದ ಹೊಸ ಬಟ್ಟೆಗಳ ಸರಭರ ಸರಭರ ಸದ್ದಿನದ್ದೇ ಸಂಭ್ರಮ. ರೂಪಂ ಸಿಲ್ಕ್ಸ್‌ನ ಹೊಸ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ರೂಪದರ್ಶಿಯರು ವಸ್ತ್ರವೈಭವವನ್ನು ಹೆಚ್ಚಿಸಿದರು.

ಮೆಲ್ಲಮೆಲ್ಲನೆ ಅಡಿಯಿಡುತ್ತ ಬಂದ ನೀಳಕಾಯದ ಹೆಂಗಳೆಯರ ಬಡನಡುವನ್ನು ಸುತ್ತಿದ ಸೀರೆಯ ಅಂದ ರೂಪದರ್ಶಿಯ ಚೆಲುವಿಗೆ ಸೆಡ್ಡು ಹೊಡೆದಂತಿತ್ತು.

ಸೀರೆಯುಟ್ಟು, ಕಡುಗುಲಾಬಿಯ ಉದ್ದ ತೋಳಿನ ರವಿಕೆ ತೊಟ್ಟ ರಮ್ಯಾ ಬಾರ್ನಾ ರ‌್ಯಾಂಪ್ ಮೇಲೆ ನಡೆದು ಬಂದಾಗ ಕಣ್ಮನ ಸೆಳೆದದ್ದು ನೀರೆಯೇ ಸೀರೆಯೇ? ಗೊಂದಲ ಬಗೆ ಹರಿಯುವ ಮುನ್ನವೇ ಮತ್ತಷ್ಟು ಸೀರೆಗಳನ್ನು ಅನಾವರಣಗೊಳಿಸಿದ್ದರು.

ಬರೀ ಸೀರೆಯೇ ಎನ್ನುವಂತೆಯೂ ಇಲ್ಲ. ಯುವ ಮನ ಸೆಳೆಯುವ ಚೂಡಿದಾರ್‌ಗಳು, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲವಾಗುವಂಥ ಉಡುಗೆ ತೊಡುಗೆಗಳು, ನವ ವಧುವಿನ ಸಂಭ್ರಮವನ್ನೇ ಪ್ರತಿನಿಧಿಸುವ ಘಾಗ್ರಾ ಚೋಲಿಗಳು ಗಮನ ಸೆಳೆದವು.

ರಮ್ಯಾಬಾರ್ನಾ ಅವರೊಂದಿಗೆ ಕಾವ್ಯಾ ಶೆಟ್ಟಿ, ಚಿತ್ರ ನಟಿ ರಶ್ಮಿ ಸಹ ಹೆಜ್ಜೆ ಹಾಕಿದರು.
ರೂಪಂ ಸಿಲ್ಕ್ಸ್‌ನ ಮಹಾಲಿಂಗಯ್ಯ ಗೌಡ ಮಾತನಾಡಿ ತಮ್ಮ ಬ್ರಾಂಡ್ ಗುಣಮಟ್ಟ, ವಿನ್ಯಾಸ, ಫ್ಯಾಶನ್ ಟ್ರೆಂಡ್ ಎಲ್ಲಕ್ಕೂ ಹೆಸರಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಇನ್ಫೆಂಟ್ರಿ ರಸ್ತೆಯಲ್ಲಿರುವ ಸಫೀನಾ ಪ್ಲಾಜಾದ ಬಳಿಯ ಎಂ.ಜೆ ಟವರ್ಸ್‌ನಲ್ಲಿ ರೂಪಂ ಸಿಲ್ಕ್ಸ್‌ನ ಎರಡು ಅಂತಸ್ತುಗಳ ವಸ್ತ್ರ ಸಂಗ್ರಹವಿದೆ. 6000 ಚದರ ಅಡಿ ವಿಸ್ತೀರ್ಣದಲ್ಲಿರುವ ವಿಶಾಲ ಸಂಗ್ರಹವಿದು.

ಮದುವೆಯಂಥ ಸಮಾರಂಭಗಳಿಗೆ ವಸ್ತ್ರ ಖರೀದಿಸಲು ವಿಶಾಲವಾದ ಜಾಗದ ಜೊತೆಗೆ ವ್ಯಾಪಕವಾದ ಸಂಗ್ರಹವನ್ನು ನೀಡಿ, ಆಯ್ಕೆ ಸುಲಭಗೊಳಿಸಲಾಗುತ್ತದೆ ಎನ್ನುವುದು ರೂಪಂ ಕೊಡುವ ಭರವಸೆ.

ಹೆಚ್ಚಿನ ಮಾಹಿತಿಗೆ: : 25585876/ 25585877
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.