ADVERTISEMENT

ಶ್ರದ್ಧೆ ಮೌಲ್ಯ ಕಲಿಸಿತು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 19:30 IST
Last Updated 30 ಮಾರ್ಚ್ 2018, 19:30 IST

ಕೊಟ್ಟೂರಿನ ಕೋಲಶಾಂತೇಶ್ವರ ಪ್ರೌಢಶಾಲೆಯಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿದ್ದಾಗ ಇಂಗ್ಲಿಷ್‌ ವಿಷಯ ಬೋಧಿಸಲು ಶಿಕ್ಷಕರು ಇರಲಿಲ್ಲ. ಆದರೆ  ಮುಖ್ಯ ಶಿಕ್ಷಕರಾಗಿದ್ದ ಶಕುಂತಲಾ. ನಮಗೆ ಇಂಗ್ಲಿಷ್‌ ಕಲಿಸಲು ಪ್ರಾರಂಭಿಸಿದರು. ನಮಗೆ ಪಾಠ ಮಾಡುವ ಸಲುವಾಗಿಯೇ ಅವರು ಇಂಗ್ಲಿಷ್‌ ಭಾಷೆಯ ವ್ಯಾಕರಣ ಕಲಿತು ಯಾವ ಆಂಗ್ಲ ಭಾಷೆಯ ಶಿಕ್ಷಕರಿಗೂ ಕಡಿಮೆಯಿಲ್ಲದಂತೆ ಕಲಿಸಿದರು.

ಮುಖ್ಯ ಶಿಕ್ಷಕರಾಗಿ ಶಾಲಾ ನಿರ್ವಹಣೆಯ ಜೊತೆಗೆ ಕನ್ನಡ, ಇಂಗ್ಲಿಷ್‌ ಎರಡು ಭಾಷೆಯ ಬೋಧನೆಯನ್ನು ಮಾಡುತ್ತಿದ್ದರು. ಕೆಲಸದಲ್ಲಿನ ಅವರ ಶ್ರದ್ಧೆ ನಮಗೆ ಮಾರ್ಗದರ್ಶಿಯಾಗಿತ್ತು. ರಸವತ್ತಾದ ಕಾವ್ಯ ವಾಚನ, ತನ್ಮಯರನ್ನಾಗಿಸುವ ವಿವರಣೆಯ ಸಮಗ್ರತೆ, ಕ್ರಿಯಾತ್ಮಕ ವ್ಯಾಕರಣ ಬೋಧನೆ, ಅಚ್ಚುಕಟ್ಟಾದ ಅಧ್ಯಯನ ಶ್ರದ್ಧೆ...  ನಮ್ಮನ್ನು ಕೇವಲ ಪರೀಕ್ಷೆಗಷ್ಟೇ ಅಣಿಗೊಳಿಸದೆ ಬದುಕಿನುದ್ದಕ್ಕೂ ಆ ಮೌಲ್ಯವನ್ನು ಕಲಿಸಿತು. ಅವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುತ್ತೇನೆ.
ನಾಗರಾಜ ಮಗ್ಗದ, ಕೊಟ್ಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT