ADVERTISEMENT

ಹಣ್ಣುಗಳಿಂದ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ಹಣ್ಣುಗಳಿಂದ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಿ
ಹಣ್ಣುಗಳಿಂದ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಿ   

ಮೊಬೈಲ್‌ ಚಾರ್ಜ್‌ ಮಾಡಲು ಏನೆಲ್ಲಾ ತಂತ್ರಜ್ಞಾನಗಳು ಈಗ ಸಂಶೋಧನೆ ನಡೆಯುತ್ತಲೇ ಇದೆ. ಇದಕ್ಕೊಂದು ಹೊಸ ಸೇರ್ಪಡೆ ಹಣ್ಣುಗಳು!

ಹೌದು. ಆ್ಯಸಿಡ್‌ ಅಂಶ ಇರುವ ಹಣ್ಣುಗಳಿಂದ ಫೋನ್‌ ಚಾರ್ಜ್‌ ಮಾಡುವ ವಿಧಾನವನ್ನು ಕೆಲವು ಸಂಶೋಧಕರು ಕಂಡುಹಿಡಿದಿದ್ದಾರೆ. ಇದಕ್ಕೆ ಅವರು ಆಯ್ದುಕೊಂಡಿರುವುದು ಒಂದು ಡಜನ್‌ನಷ್ಟು ಆ್ಯಸಿಡಿಕ್ ಹಣ್ಣುಗಳು. ಎಂದರೆ ಬಾಳೆಹಣ್ಣು, ಮೂಸಂಬಿ, ಸೇಬು ಇತ್ಯಾದಿಗಳು.

ಫೋನ್‌ ಚಾರ್ಜ್‌ ಮಾಡಲು ಸಂಶೋಧಕರು ವಿವರಿಸುವುದು ಹೀಗೆ: ತಾಮ್ರದ ಸ್ಕ್ರೂವನ್ನು ಪ್ರತೀ ಹಣ್ಣಿಗೆ ಸಿಕ್ಕಿಸಬೇಕು. ಪ್ರತಿಯೊಂದು ಹಣ್ಣಿಗೂ ಜಿಂಕ್ ನೇಲ್ (ಮೊಳೆ) ಅನ್ನು ಅಳವಡಿಸಬೇಕು. ಮೊಳೆಗಳ ನಡುವೆ ಸಾಕಷ್ಟು ಅಂತರವಿರುವಂತೆ ನೋಡಿಕೊಳ್ಳಬೇಕು. ಈ ಮೊಳೆಯ ಸಮೀಪದಲ್ಲೇ ತಾಮ್ರದ ಚೂರನ್ನು ಅಳವಡಿಸಿ ಇವೆರಡೂ ಒಂದಕ್ಕೊಂದು ತಗುಲದಂತೆ ನೋಡಿಕೊಳ್ಳಬೇಕು. ಹೀಗೆ ಎಲ್ಲಾ ಹಣ್ಣುಗಳಿಗೂ ಮಾಡಬೇಕು.

ವೃತ್ತಾಕಾರವಾಗಿ ಎಲ್ಲ ಹಣ್ಣುಗಳನ್ನು ಇಟ್ಟು ತಾಮ್ರದ ತಂತಿ ಮೂಲಕ ಒಂದಕ್ಕೊಂದು ಸಂಪರ್ಕ ಕಲ್ಪಿಸಬೇಕು. ತಾಮ್ರದ ತುಂಡಿನಿಂದ ಇನ್ನೊಂದು ಹಣ್ಣಿನಲ್ಲಿ ಅಳವಡಿಸಿರುವ ಜಿಂಕ್‌ಗೆ ತಂತಿಯನ್ನು ಸಂಪರ್ಕಪಡಿಸಬೇಕು.

ಯುಎಸ್‌ಬಿ ಚಾರ್ಜಿಂಗ್ ಕೇಬಲ್‌ನ ದೊಡ್ಡ ಭಾಗವನ್ನು ತುಂಡು ಮಾಡಿ ತಂತಿ ಕಾಣಿಸುವಂತೆ ಹಣ್ಣಿನ ಚೈನ್‌ಗೆ ಪವರ್ ವಯರ್‌ಗಳನ್ನು ಸಂಪರ್ಕಪಡಿಸಬೇಕು. ಪ್ರತೀ ಹಣ್ಣು ಅರ್ಧ ವೋಲ್ಟ್‌ನಷ್ಟು ವಿದ್ಯುತ್ ನೀಡುತ್ತದೆ.

ಹೆಚ್ಚು ಸಮಯದವರೆಗೆ ಈ ಹಣ್ಣಿನ ಚಾರ್ಜ್ ಬಳಸಲಾಗುವುದಿಲ್ಲ. ಆದರೆ ಕರೆಂಟ್‌ ಕೈಕೊಟ್ಟಾಗ ಈ ಹಣ್ಣುಗಳು ಇದ್ದಲ್ಲಿ ಟ್ರೈ ಮಾಡಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.