ADVERTISEMENT

ಹೆಜ್ಜೆ ಇಟ್ಟರೆ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST
ಹೆಜ್ಜೆ ಇಟ್ಟರೆ ವಿದ್ಯುತ್
ಹೆಜ್ಜೆ ಇಟ್ಟರೆ ವಿದ್ಯುತ್   

ವಿದ್ಯುತ್ ಶಕ್ತಿ ಉತ್ಪಾದಿಸುವ ಸಾಕಷ್ಟು ಸಾಧನಗಳು ಉದಾಹರಣೆಯಲ್ಲಿವೆ. ಅದೇ ಹಾದಿಯಲ್ಲಿ ಇತ್ತೀಚೆಗೆ ಲಂಡನ್‌ನಲ್ಲೂ ಪ್ರಯೋಗವೊಂದು ನಡೆದಿದೆ. ಅದೇ ಸ್ಮಾರ್ಟ್‌ ಸ್ಟ್ರೀಟ್.

ಈ ಹಾದಿಯಲ್ಲಿ ಹೆಜ್ಜೆ ಇಟ್ಟರೆ ಸಾಕು ಶಕ್ತಿ ಉತ್ಪಾದನೆಯಾಗುತ್ತದೆ. ಪವೇಗನ್ ಕಂಪೆನಿ ಇಲ್ಲಿನ ಬರ್ಡ್‌ ಸ್ಟ್ರೀಟ್‌ನಲ್ಲಿ 107 ಚದರ ಅಡಿಯ ಪಾದಚಾರಿ ಮಾರ್ಗವನ್ನು ರೂಪಿಸಿದ್ದು. ಪಾದಚಾರಿಗಳು, ರಸ್ತೆಯನ್ನು ಹಾದುಹೋಗುವಾಗ ಆ್ಯಪ್‌ಗೆ ಸಂಪರ್ಕಿಸಿಕೊಂಡರೆ ಅವರ ಹೆಜ್ಜೆಗಳು ಎಷ್ಟು ವಿದ್ಯುತ್ ಉತ್ಪಾದಿಸಿದವು ಎಂಬ ಮಾಹಿತಿಯೂ ದೊರೆಯುತ್ತದೆ.

ಹೆಜ್ಜೆಗಳ ಶಕ್ತಿಯನ್ನೇ ವಿದ್ಯುತ್ ಆಗಿ ಬದಲಾಯಿಸಿ ಅಲ್ಲಿನ ಬೀದಿ ದೀಪಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ, ‘ಶಕ್ತಿ ಉತ್ಪಾದಿಸಿದ ವಿಶ್ವದ ಮೊದಲ ರಸ್ತೆ’ ಎಂದೂ ಕರೆಸಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.