ADVERTISEMENT

ಹ್ಯಾರಿಪಾಟರ್ ರಿಮೋಟ್‌ ಕಂಟ್ರೋಲ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಹ್ಯಾರಿಪಾಟರ್ ರಿಮೋಟ್‌ ಕಂಟ್ರೋಲ್
ಹ್ಯಾರಿಪಾಟರ್ ರಿಮೋಟ್‌ ಕಂಟ್ರೋಲ್   

ಹ್ಯಾರಿಪಾಟರ್ ಚಿತ್ರ ನೋಡಿದವರು ಚಿತ್ರದ ನಾಯಕ ಬಳಸುವ ಮಾಯಾ ಕಡ್ಡಿ(ವ್ಯಾಂಡ್‌) ಗಮನಿಸಿಯೇ ಇರುತ್ತಾರೆ. ಆ ಕಡ್ಡಿ ನಮಗೂ ಸಿಕ್ಕಿದ್ದರೆ ಮನಸ್ಸಿನ ಬೇಡಿಕೆಗಳನ್ನೆಲ್ಲ ಈಡೇರಿಸಿಕೊಳ್ಳಬಹುದಿತ್ತು ಎಂದು ಹಲವರಿಗೆ ಅನಿಸಿರಲು ಸಾಕು. ನಿಮಗೂ ಇಂತಹ ಆಸೆಗಳಿದ್ದರೆ ಅದು ಈಡೇರುವ ಸಾಧ್ಯತೆ ಇದೆ. ಹಾಗಂತ ಹೆಚ್ಚು ಖುಷಿಪಡಬೇಡಿ. ಯಾಕೆಂದರೆ ಈ ಕಡ್ಡಿಗೆ ಮನಸ್ಸಿನ ಬೇಡಿಕೆಗಳನ್ನು ಅರಿಯುವ ಶಕ್ತಿಯಿಲ್ಲ.

ಖಾಸಗಿ ಕಂಪೆನಿಯೊಂದು ಹ್ಯಾರಿಪಾಟರ್‌ನ ಮಾಯಾಕಡ್ಡಿಯನ್ನೇ ಹೋಲುವ ಉಪಕರಣವನ್ನು ತಯಾರಿಸಿ ಮಾರಾಟಕ್ಕಿಟ್ಟಿದೆ. ಇದಕ್ಕೆ ಮಾಯಾ ಶಕ್ತಿ ಇಲ್ಲದಿರಬಹುದು. ಆದರೆ ಟಿವಿ ಚಾನೆಲ್‌ಗಳನ್ನು ಬದಲಿಸುವ ಶಕ್ತಿ ಇದೆ. ಹ್ಯಾರಿಪಾಟರ್‌ನ ಮಾಯಾ ಕಡ್ಡಿಯನ್ನೇ ಹೋಲುವ ಈ ರಿಮೋಟ್‌ ಕಂಟ್ರೋಲ್ ಈಗಾಗಲೇ ಹಲವು ಆನ್‌ಲೈನ್‌ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.

*

ADVERTISEMENT


ಗಾಳಿಗೆ ಬೆಂಡಾದ ಮರ
ನ್ಯೂಜಿಲೆಂಡ್‌ನ ದಕ್ಷಿಣ ದ್ವೀಪದಲ್ಲಿರುವ ಈ ಮರಗಳ ಗುಂಪನ್ನು ನೋಡುವಾಗ ಇನ್ನೇನು ಕೆಳಗೆ ಬೀಳುತ್ತದೆಯೇ ಎನ್ನುವಂತೆ ಕಾಣುತ್ತದೆ. ಆದರೆ ಇದು ಪ್ರಕೃತಿಯೇ ಸೃಷ್ಟಿಸಿರುವ ಸೌಂದರ್ಯ.

ಈ ಮರಗಳು ಮೊದಲು ನೆರವಾಗಿಯೇ ಇದ್ದವು. ಆದರೆ ಕೆಲವು ವರ್ಷಗಳ ಹಿಂದೆ ಜೋರಾಗಿ ಬೀಸಿದ ಗಾಳಿಗೆ ಮರಗಳು ಹೀಗೆ ಬಾಗಿಹೋಗಿವೆ. ಆದರೆ ಇದೇ ಈಗ ಇದು ಆಕರ್ಷಣೀಯ ಸ್ಥಳವಾಗಿದೆ. ಇದನ್ನು ನೋಡುವ ಸಲುವಾಗಿಯೇ ಹಲವರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ ಮಳೆಗೆ ಹಲವು ಪ್ರಾಣಿಗಳಿಗೆ ಆಶ್ರಯ ನೀಡುವ ಸ್ಥಳವೂ ಆಗಿದೆ. ಕೃಷಿಕರು ಜೋರಾಗಿ ಬೀಸುವ ಗಾಳಿ, ಮಳೆಗೆ ರಕ್ಷಣೆ ಪಡೆಯಲು ಇದನ್ನು ಬಳಸಿಕೊಳ್ಳುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.