ADVERTISEMENT

ವರ್ಣರಂಜಿತ ವಿಮಾನ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
ವರ್ಣರಂಜಿತ ವಿಮಾನ ನಿಲ್ದಾಣ
ವರ್ಣರಂಜಿತ ವಿಮಾನ ನಿಲ್ದಾಣ   

ವಂಡರ್‌ಲ್ಯಾಂಡ್‌ನಲ್ಲಿ ಇನ್ನೊಂದಿಷ್ಟು

ಒಂದೆಡೆ ಹೊರಳಿದರೆ ವಿಮಾನ ನಿಲ್ದಾಣ, ಇನ್ನೊಂದೆಡೆ ಒಂದು ದೇಶದಿಂದ ಇನ್ನೊಂದು ದೇಶವನ್ನು ಸಂಪರ್ಕಿಸುವ ರೈಲು ಮಾರ್ಗಗಳು, ಜಲಮಾರ್ಗಗಳು, ಸಮುದ್ರದ ಚೆಲುವು ಬಿಂಬಿಸುವ ಬೀಚ್‌ಗಳು, ಹಿಮಾಚ್ಛಾದಿತ ಬೆಟ್ಟಗುಡ್ಡ, ಬೆರಗು ಮೂಡಿಸುವ ನಗರಗಳು. ಪ್ರಪಂಚದ ನಾನಾ ಪ್ರದೇಶಗಳ, ವಿದ್ಯಮಾನಗಳ ಚೆಲುವನ್ನು ಆಕಾಶದೆತ್ತರದಿಂದ ಕಣ್ತುಂಬಿಕೊಳ್ಳುವುದು ಸುಲಭ. ಆದರೆ ನಿಂತಲ್ಲೇ ಈ ಎಲ್ಲಾ ಚೆಲುವು ಕಂಗಳಿಗೆ ಪ್ರಾಪ್ತವಾಗುವಂತೆ ಮಾಡಿದೆ ಜರ್ಮನಿಯಲ್ಲಿರುವ ಮಿನಿಯೇಚರ್‌ ವಂಡರ್‌ಲ್ಯಾಂಡ್‌.

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಿರ್ಮಾಣವಾಗಿರುವ ಈ ಬೃಹತ್‌ ಲೋಕದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದು ಸಹೋದರರಾದ ಫ್ರೆಡ್ರಿಕ್‌ ಹಾಗೂ ಗೆರಿಟ್‌ ಬ್ರಾವುನ್‌. ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹುಟ್ಟಿಕೊಂಡ ಈ ಕಲ್ಪನೆ ಬೆಳೆದು ಇಂದಿಗೆ ವಂಡರ್‌ಲ್ಯಾಂಡ್‌ನಲ್ಲಿ ವಿವಿಧ ದೇಶಗಳು ನಿರ್ಮಾಣ ಕಂಡಿವೆ.

ADVERTISEMENT

ಕೇಂದ್ರ ಜರ್ಮನಿ, ನುಫೆಂಗೆನ್‌, ಆಸ್ಟ್ರಿಯಾ, ಹ್ಯಾಂಬರ್ಗ್‌, ಅಮೆರಿಕ, ಸ್ಕ್ಯಾಂಡಿನೇವಿಯಾ, ಸ್ವಿಟ್ಜರ್ಲೆಂಡ್‌, ನುಫಿಂಗೆನ್‌ ವಿಮಾನ ನಿಲ್ದಾಣ, ಇಟಲಿ ನಿರ್ಮಿಸಲಾಗಿದ್ದು ವೆನಿಸ್‌ ನಿರ್ಮಾಣ ಕಾರ್ಯ ಮುಂದುವರೆದಿದೆ. 2020ರ ಹೊತ್ತಿಗೆ ವಿವಿಧ ಯೋಜನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಎಲ್ಲವೂ ನೈಜತೆ ಬಿಂಬಿಸುವಂತಿರುವುದು ಇದರ ವಿಶೇಷ.

ವಂಡರ್‌ಲ್ಯಾಂಡ್‌ ಆಫೀಷಿಯಲ್‌ ವಿಡಿಯೊ– http://bit.ly/Mzsled

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.