ADVERTISEMENT

ಪಿಯಾಗಿಯೊದಿಂದ ವೆಸ್ಪಾ ಎಲೆಟ್ರಿಕಾ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಪಿಯಾಗಿಯೊದಿಂದ ವೆಸ್ಪಾ ಎಲೆಟ್ರಿಕಾ
ಪಿಯಾಗಿಯೊದಿಂದ ವೆಸ್ಪಾ ಎಲೆಟ್ರಿಕಾ   

ಇಟಲಿಯ ಸ್ಕೂಟರ್ ತಯಾರಕ ಕಂಪನಿ ಪಿಯಾಗಿಯೊ, ವೆಸ್ಪಾ ಎಲೆಟ್ರಿಕಾ ಸ್ಕೂಟರ್‌ ಅನ್ನು ಮಿಲಾನ್‌ ವಾಹನ ಮೇಳ (ಇಐಸಿಎಂಎ)ದಲ್ಲಿ ಪ್ರದರ್ಶನಗೊಳಿಸಿದೆ. ಸ್ಕೂಟರ್‌ಗೆ ಹೊರನೋಟದಲ್ಲಿ ಸಾಂಪ್ರದಾಯಿಕ ವೆಸ್ಪಾ ಲುಕ್‌ ನೀಡಿದ್ದು, ಒಳಗೆ ಮಾಡರ್ನ್ ಬ್ಯಾಟರಿ ಪವರ್‌ಟ್ರೇನ್ ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಮೋಟಾರು ಬೆಂಬಲಿತವಾಗಿದ್ದು, 2 ಕಿಲೋ ವ್ಯಾಟ್ ನಿರಂತರ ಶಕ್ತಿ ಹಾಗೂ 4 ಕಿಲೋ ವ್ಯಾಟ್ ಪೀಕ್ ಪವರ್ ಒದಗಿಸುತ್ತದೆ. 100 ಕಿ.ಮೀ ಮೈಲೇಜ್ ನೀಡಲಿದೆ.

ಸಾಂಪ್ರದಾಯಿಕ 50 ಸಿಸಿ ಸ್ಕೂಟರ್‌ನಂತೆ ಇದರ ಪರ್ಫಾರ್ಮೆನ್ಸ್ ಇರುವುದಾಗಿ ಕಂಪನಿ ತಿಳಿಸಿದೆ. ಇದರಲ್ಲಿ ಎಕ್ಸ್‌ ವೇರಿಯಂಟ್ ಇದ್ದು, ಎಲೆಕ್ಟ್ರಿಕ್‌ ಮೋಟಾರಿನೊಂದಿಗೆ 4 ಸ್ಟ್ರೋಕ್ ಎಂಜಿನ್‌ ಸೇರಿ ಎರಡು ಪಟ್ಟು ಹೆಚ್ಚು ಮೈಲೇಜ್ ನೀಡಲಿದೆ. ಅಂದರೆ 200 ಕಿ.ಮೀ.

ಸಂಪೂರ್ಣ ಚಾರ್ಜ್‌ಗೆ ನಾಲ್ಕು ಗಂಟೆ ಹಿಡಿಯುತ್ತದೆ. ಸ್ಕೂಟರ್‌ಗೆ ಟಿಎಫ್‌ಟಿ ಡಿಸ್ಪ್ಲೇ ಇದ್ದು, ಮಲ್ಟಿಮೀಡಿಯಾ ಸಿಸ್ಟಂ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಇರುವುದು ವಿಶೇಷ. ಬೆಲೆಯನ್ನು ಇನ್ನೂ ನಿಗದಿಗೊಳಿಸಿಲ್ಲ. 2018ಕ್ಕೆ ಬಿಡುಗಡೆಯಾಗುವ ಸೂಚನೆಯನ್ನು ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.