ADVERTISEMENT

ಮಾಯಾ ಫೆಸ್ಟ್ನ ಮೋಡಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 19:30 IST
Last Updated 27 ಸೆಪ್ಟೆಂಬರ್ 2011, 19:30 IST
ಮಾಯಾ ಫೆಸ್ಟ್ನ ಮೋಡಿ
ಮಾಯಾ ಫೆಸ್ಟ್ನ ಮೋಡಿ   

ಮತ್ತೆ ಬಂದಿದೆ ಕಾಲೇಜು `ಫೆಸ್ಟ್~ಗಳ ಕಾಲ. ವಿದ್ಯಾರ್ಥಿಗಳೆಲ್ಲರೂ ತಮ್ಮ ಅಧ್ಯಯನವನ್ನು ಬದಿಗಿತ್ತು ಈ `ಫೆಸ್ಟ್~ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾಲೇಜಿನ ಅಧ್ಯಾಪಕರ ಸಂಪೂರ್ಣ ಬೆಂಬಲವೂ ಇದೆ. ಸಾಮಾನ್ಯಾಗಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳ ಕಾಲ ನಡೆಯುವ ಈ ಕಾಲೇಜು `ಫೆಸ್ಟ್~ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಸೂಕ್ತ ವೇದಿಕೆ ಎಂದೇ ಹೇಳಬಹುದು.

ಕಾಲೇಜು `ಫೆಸ್ಟ್~ಗಳ ಹೆಸರುಗಳ ಆಯ್ಕೆಯಲ್ಲೂ ಒಂದು ಕ್ರಿಯೇಟಿವಿಟಿ ಇದೆ ಎಂದರೆ ತಪ್ಪಲ್ಲ. ಅಂತೆಯೇ    ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಇತ್ತೀಚೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ್ಲ್ಲಲಿರುವ ತನ್ನ ಕ್ಯಾಂಪಸ್‌ನಲ್ಲಿ ಅಂತರ ಕಾಲೇಜು `ಫೆಸ್ಟ್~ `ಮಾಯಾ-2011~ ಅನ್ನು ಆಯೋಜಿಸಿತ್ತು.

ಬೆಂಗಳೂರು ನಗರ ಹಾಗೂ ಹೊರವಲಯದ ಸುಮಾರು 50 ಕಾಲೇಜುಗಳು ಇದರಲ್ಲಿ ಭಾಗವಹಿಸಿದ್ದವು. ತಾಂತ್ರಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಮ್ಯಾನೇಜ್‌ಮೆಂಟ್ ಹೀಗೆ ವಿವಿಧ ವಿಭಾಗಗಳಲ್ಲಿ ನಡೆಸಿದ  ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಮೊದಲನೆಯ ದಿನ ಸಂಗೀತದ ಸ್ಪರ್ಧೆ ಏರ್ಪಡಿಸಲಾಗಿತ್ತು. ಅಂತಾಕ್ಷರಿ, ಸಮೂಹ ಗಾಯನ ಮುಂತಾದವುಗಳು ಇದರ ಅಂಗವಾಗಿ ನಡೆದವು. ಜತೆಗೆ ಫ್ಯಾಷನ್ ಶೋ, ಚಿತ್ರ ತಯಾರಿಕೆ ಮತ್ತು ಆಟದ ಸ್ಪರ್ಧೆಗಳಾದ       `ಕೌಂಟರ್ ಸ್ಟ್ರೈಕ್, `ಬೀದಿ ಕ್ರಿಕೆಟ್~ ಮತ್ತು `ಬೀದಿ ಫುಟ್ಬಾಲ್~ ಮತ್ತು `ಸ್ಲೋ ಡ್ರ್ಯಾಗ್~ ಮುಂತಾದವುಗಳು ನಡೆದವು. ಸ್ಪರ್ಧೆ ಬರೀ ಸೀರಿಯಸ್ ಆದರೆ ಮಾತ್ರ ಸಾಕೇ? ವಿದ್ಯಾರ್ಥಿಗಳ ಉತ್ಸಾಹ ಹೆಚ್ಚಲು ಸ್ವಲ್ಪ ಮನರಂಜನೆ ಏನಾದರೂ ಬೇಡವೇ? ಅದಕ್ಕೇ ಗ್ಲೇಜ್ ಪೇಂಟಿಂಗ್, ಕೊಲಾಜ್ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಇವು `ಫೆಸ್ಟ್~ಗೆ ಇನ್ನಷ್ಟು ಮೆರುಗು ನೀಡಿದವು. ಇದೇ ವೇಳೆ ಮೆಣಸು ತಿನ್ನುವುದು ಮುಂತಾದ ತಮಾಷೆಯ ಸ್ಪರ್ಧೆಗಳೂ `ಫೆಸ್ಟ್~ಗೆ ಮನರಂಜನೆಯನ್ನು ನೀಡಿದವು.

`ಫೆಸ್ಟ್~ ಸೀರಿಯಸ್ ಆಗಿರಬಾರದು ಎಂದು ಅದಕ್ಕೆ ಮನರಂಜನೆಯ ಬಣ್ಣ ನೀಡಲಾಯಿತು. ಆದರೆ ಅಷ್ಟು ಮಾತ್ರ ಸಾಲದು. ವಿದ್ಯಾರ್ಥಿಗಳು       ಪ್ರತಿಭಾವಂತರು. ಅವರ ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸವೂ ಆಗಬೇಕು. ಅದಕ್ಕೇ ಸಾಹಿತ್ಯಕ ಸ್ಪರ್ಧೆಗಳಾದ ಕ್ರಿಯೇಟಿವ್ ಬರವಣಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಮೂಲಕ ವಿದ್ಯಾರ್ಥಿಗಳ ವ್ಯಾಕರಣ, ಪದ ಸಂಪತ್ತು ಮುಂತಾದವುಗಳನ್ನು ಪರೀಕ್ಷೆಗೊಳಪಡಿಸಲಾಯಿತು.

ಫ್ಯಾಷನ್ ಷೋ ಇಲ್ಲದೆ `ಫೆಸ್ಟ್~ಗಳೇ ಇಲ್ಲ ಎನ್ನಬಹುದು. ಫ್ಯಾಷನ್ ಷೋ ಅಂತೂ ಈಗ ಫೆಸ್ಟ್‌ಗಳ ಅವಿಭಾಜ್ಯ ಅಂಗ ಎಂದೇ ಹೇಳಬಹುದು. ಇಲ್ಲಿಯೂ ಅಷ್ಟೆ. ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಫ್ಯಾಷನ್ ಷೋದಲ್ಲಿ ವಿದ್ಯಾರ್ಥಿಗಳು ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟು ತಮ್ಮ ವಿವಿಧ ಪ್ರತಿಭೆಯನ್ನು ಪ್ರದರ್ಶಿಸಿದವು.

ಇದಾದ ಬಳಿಕ ನಡೆದ ಡಿಜೆ ಸ್ಪರ್ಧೆಯಲ್ಲಿ ನಗರದ ಯುವಜನರ ಉತ್ಸಾಹ ಮುಗಿಲು ಮುಟ್ಟಿತ್ತು. ನಡು ನಡುವೆ ನಡೆದ ಶಾಸ್ತ್ರೀಯ ಮತು ಪಾಶ್ಚಿಮಾತ್ಯ ನೃತ್ಯಗಳು ಪ್ರೇಕ್ಷಕರ ಆವೇಶವನ್ನು ಮತ್ತಷ್ಟು ಹೆಚ್ಚಿಸಿದವು. ವಿದ್ಯಾರ್ಥಿಗಳು  ಕೇಕೆ ಹಾಕಿ ಕುಣಿದು ಸಂತಸಪಟ್ಟರು.

ಎರಡನೇ ದಿನದಂದು ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ನಡೆದವು. ಸಮಕಾಲೀನ ಮತ್ತು ಶಾಸ್ತ್ರೀಯ ನೃತ್ಯಗಳಲ್ಲದೆ `ಏರ್ ಕ್ರಾಷ್, ಬ್ಲಫ್ ಮಾಸ್ಟರ್,  ಆ್ಯಕ್ಟ್ ಆ್ಯಂಡ್ ರಿಯಾಕ್ಟ್ ಮುಂತಾದ ನಾಟಕಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆದವು.  ಸರ್ಕ್ಯೂಟ್ ಬಿಲ್ಡಿಂಗ್ ಮತ್ತು ರೋಬೊಟಿಕ್ಸ್ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯವನ್ನು ಹೊರಗೆಳೆಯಿತು.

ಆದರೆ, `ಬ್ಯೂಟಿ ಆ್ಯಂಡ್ ದಿ ಗೀಕ್~,  ` ಟ್ರೆಷರ್‌ಹಂಟ್~ ಮತ್ತು `ಸ್ಟ್ರೀಟ್ ಪ್ಲೇ~ಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಸ್ವರಾತ್ಮ ಬ್ಯಾಂಡ್‌ನ ರ‌್ಯಾಕಿಂಗ್ ಫರ್‌ಫಾರ್ಮನ್ಸ್‌ನೊಂದಿಗೆ ಎರಡು ದಿನಗಳ ಕಾರ್ಯಕ್ರಮ ಕೊನೆಗೊಂಡಿತು.

ಅಧ್ಯಾಪಕರ ಸಹಕಾರ ಇಲ್ಲದೆ ವಿದ್ಯಾರ್ಥಿಗಳು ಏನೂ ಮಾಡುವಂತಿಲ್ಲ. ಕಾಲೇಜಿನ `ಫೆಸ್ಟ್~ ಸತತ ಮೂರನೇ ವರ್ಷ ಯಶಸ್ಸು ಕಂಡದ್ದಕ್ಕೆ ಕಾಲೇಜಿನ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದರು. `ಫೆಸ್ಟ್~ ಕೊನೆಗೂ ಮುಗಿದಾಗ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳಿನಿಂದ ನಡೆಸಿಕೊಂಡು ಬರುತ್ತಿದ್ದ ತಯಾರಿ ಸಾರ್ಥಕತೆ ಕಂಡಿತ್ತು.

 ಜತೆಗೆ ಕಾಲೇಜಿನ ಉಳಿದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನೀಡಿದ ಬೆಂಬಲವೂ ಸೇರಿಕೊಂಡಾಗ ಕಾಲೇಜು ಫೆಸ್ಟ್ ಯಶಸ್ವಿ `ಫೆಸ್ಟ್~ ಆಗಿ ಮೂಡಿಬಂದಿತ್ತು.               

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.