ADVERTISEMENT

ಸಂಪರ್ಕ ಸಂಖ್ಯೆಗಳನ್ನು ರಿಸ್ಟೋರ್ ಮಾಡುವುದು ಹೇಗೆ?

ದಯಾನಂದ ಎಚ್‌.ಎಚ್‌.
Published 20 ಡಿಸೆಂಬರ್ 2017, 19:30 IST
Last Updated 20 ಡಿಸೆಂಬರ್ 2017, 19:30 IST

ನಿಮ್ಮ ಮೊಬೈಲ್‌ನ ಕಾಂಟಾಕ್ಟ್‌ ಲಿಸ್ಟ್‌ನಲ್ಲಿ ಏನೋ ಒತ್ತಲು ಹೋಗಿ ಡಿಲೀಟ್‌ ಒತ್ತಿ ಸಂಪರ್ಕ ಸಂಖ್ಯೆಯೊಂದು ಅಳಿಸಿ ಹೋಗಿದೆಯೇ? ಆ ಸಂಖ್ಯೆಯನ್ನು ಮರಳಿ ಪಡೆಯುವುದು ಹೇಗೆ ಎಂದು ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.

ಡಿಲೀಟ್‌ ಆದ ಕಾಂಟಾಕ್ಟ್‌ಗಳನ್ನು ರಿಸ್ಟೋರ್‌ ಮಾಡುವ ಆಯ್ಕೆ ಗೂಗಲ್‌ ಕಾಂಟಾಕ್ಟ್ಸ್‌ನಲ್ಲಿದೆ. ಇದಕ್ಕಾಗಿ ನಿಮ್ಮ ಕಾಂಟಾಕ್ಟ್‌ ಲಿಸ್ಟ್‌ ಗೂಗಲ್‌ ಅಕೌಂಟ್‌ ಜತೆಗೆ ಸಿಂಕ್‌ ಆಗಿದ್ದರೆ ಸಾಕು. ಕಾಂಟಾಕ್ಟ್‌ಗಳನ್ನು ರಿಸ್ಟೋರ್‌ ಮಾಡಲು ಮೊದಲು ನಿಮ್ಮ ವೆಬ್‌ ಬ್ರೌಸರ್‌ನಲ್ಲಿ ಗೂಗಲ್‌ ಅಕೌಂಟ್‌ಗೆ ಸೈನ್‌ಇನ್‌ ಆಗಿ. ಗೂಗಲ್‌ ಹೋಮ್‌ ಪೇಜ್‌ನ ಬಲಭಾಗದಲ್ಲಿ ಕಾಣುವ ಒಂಬತ್ತು ಚುಕ್ಕೆಗಳ Google apps ಮೇಲೆ ಕ್ಲಿಕ್‌ ಮಾಡಿ.

ಇಲ್ಲಿ Contacts ಮೇಲೆ ಕ್ಲಿಕ್ಕಿಸಿ. Contactsನ ಹೊಸ ವರ್ಷನ್‌ನಲ್ಲಿ ಎಡಭಾಗದ ಆಯ್ಕೆಗಳ ಕೆಳಗೆ ಕಾಣುವ Switch to the old version ಎಂಬಲ್ಲಿ ಕ್ಲಿಕ್‌ ಮಾಡಿ. ಈಗ ಹಳೆಯ ವರ್ಷನ್‌ನ ಕಾಂಟಾಕ್ಟ್ಸ್ ಪೇಜ್‌ ತೆರೆದುಕೊಳ್ಳುತ್ತದೆ.

ADVERTISEMENT

ಈಗ ಎಡಭಾಗದಲ್ಲಿ ಕಾಣುವ More ಎಂಬಲ್ಲಿ ಕ್ಲಿಕ್ಕಿಸಿ. ಇಲ್ಲಿನ ಆಯ್ಕೆಗಳಲ್ಲಿ Restore Contacts ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎಷ್ಟು ದಿನಗಳ ಹಿಂದಿನಿಂದ ರಿಸ್ಟೋರ್ ಮಾಡಬೇಕು ಎಂಬ ಆಯ್ಕೆಗಳನ್ನು ಕೇಳುತ್ತದೆ. 10 ನಿಮಿಷದ ಹಿಂದಿನಿಂದ 30 ದಿನಗಳವರೆಗಿನ ಕಾಂಟಾಕ್ಟ್‌ಗಳನ್ನು ರಿಸ್ಟೋರ್ ಮಾಡಲು ಇಲ್ಲಿ ಅವಕಾಶವಿದೆ. ಇಲ್ಲಿ ನಿಮಗೆ ಬೇಕಾದ ಅವಧಿಯನ್ನು ಆಯ್ಕೆ ಮಾಡಿಕೊಂಡು Restore ಎಂಬಲ್ಲಿ ಕ್ಲಿಕ್ಕಿಸಿ.

ನೀವು ಆಯ್ಕೆ ಮಾಡಿಕೊಂಡ ಅವಧಿಯಲ್ಲಿ ಡಿಲೀಟ್‌ ಆಗಿರುವ ಕಾಂಟಾಕ್ಟ್‌ಗಳು ಈಗ ರಿಸ್ಟೋರ್ ಆಗುತ್ತವೆ. 30 ದಿನಗಳ ಹಿಂದೆ ಡಿಲೀಟ್‌ ಆಗಿರುವ ಕಾಂಟಾಕ್ಟ್‌ಗಳನ್ನು ರಿಸ್ಟೋರ್‌ ಮಾಡಲು ಇಲ್ಲಿ ಅವಕಾಶವಿಲ್ಲ. ಡಿಲೀಟ್‌ ಆಯಿತೆಂದು ಮತ್ತೊಬ್ಬರಲ್ಲಿ ಆ ಕಾಂಟಾಕ್ಟ್‌ ಕೇಳುವ ಬದಲು ನೀವೇ ರಿಸ್ಟೋರ್‌ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.