ADVERTISEMENT

ಹೀರೊ ಲೀಪ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST
ಹೀರೊ ಲೀಪ್
ಹೀರೊ ಲೀಪ್   

ಹೀರೊ ಮೋಟೊಕಾರ್ಪ್ ಹೋಂಡಾ ಕಂಪೆನಿಯೊಂದಿಗಿನ 27 ವರ್ಷಗಳ ಸಂಬಂಧವನ್ನು ಮುರಿದುಕೊಂಡು ಇದೀಗ ಸ್ವತಂತ್ರವಾಗಿ ಹೊಸ ಹಾದಿಯತ್ತ ಸಾಗಿದೆ. ಕಂಪೆನಿ ಇತ್ತೀಚಿಗೆ ಹೈಬ್ರಿಡ್ ಸ್ಕೂಟರ್‌ನ ಮಾದರಿ ವಿನ್ಯಾಸವನ್ನು ಅನಾವರಣಗೊಳಿಸಿತು. ಲೀಪ್ ಎಂಬ ಹೆಸರಿನ ಈ ಸ್ಕೂಟರ್ ಪೆಟ್ರೋಲ್ ಹಾಗೂ ಬ್ಯಾಟರಿಯಿಂದ ಚಲಿಸುವ ಸಾಮರ್ಥ್ಯ ಹೊಂದಿದೆ.

ಹೈಬ್ರಿಡ್ ಸ್ಕೂಟರ್ ಲೀಪ್‌ನ ತಂತ್ರಜ್ಞಾನಕ್ಕಾಗಿ ಕಂಪೆನಿ ಮೂರು ಅಂತರರಾಷ್ಟ್ರೀಯ ಪೇಟೆಂಟ್ ಹಾಗೂ ಇದರ ವಿನ್ಯಾಸಕ್ಕೆ ಒಂಬತ್ತು ಅಂತರರಾಷ್ಟ್ರೀಯ ಪೇಟೆಂಟ್ ಪಡೆದುಕೊಂಡಿದೆ. ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಭಾರತದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಯೂ ಇದರದ್ದು. ಹೀರೊ ಮೋಟೊಕಾರ್ಪ್‌ನ ಈ ಸಾಧನೆಗೆ ವಿದೇಶಿ ಕಂಪೆನಿಗಳ ಸಾಥ್ ಕೂಡಾ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.