ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2016, 19:30 IST
Last Updated 21 ಆಗಸ್ಟ್ 2016, 19:30 IST

1) 1919ರಲ್ಲಿ ರೌಲತ್ ಕಾಯ್ದೆ ಅಥವಾ ಕಪ್ಪು ಕಾಯ್ದೆಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ ಯಾರು ?
a)
ಜನರಲ್ ಡಯಾರ್
b) ಸಿಡ್ನಿ ರೌಲತ್
c) ಚಾಪೇಕರ್ ಪ್ಲೇಗ್
d) ಜಾನ್ ಹಂಟರ್

2) 1913ರಲ್ಲಿ ಅಮೆರಿಕದಲ್ಲಿ ಲಾಲ್ ಹರ ದಯಾಳ್ ಮತ್ತು ಸೋಹನ್ ಸಿಂಗ್ ಅವರು ಸ್ಥಾಪನೆ ಮಾಡಿದ ಪಕ್ಷ ಯಾವುದು?
a)
ಗದ್ದರ್ ಪಕ್ಷ  
b) ಹಿಂದೂಸ್ತಾನ್ ರಿಪಬ್ಲಿಕನ್ ಪಕ್ಷ
c) ಸ್ವರಾಜ್ ಪಕ್ಷ 
d) ಅಭಿನವ ಭಾರತ ಪಕ್ಷ

3) ಪಂಜಾಬ್ ಕೇಸರಿ ಎಂದು ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಬರೆದ ಪುಸ್ತಕವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a)
ಅನ್‌ಹ್ಯಾಫಿ ಇಂಡಿಯಾ      
b) ಲೈಫ್ ಡಿವೈನ್
c) ಇಂಡಿಯಾ ಡಿವೈಡೆಡ್       
d) ಸಾಂಗ್ಸ್ ಆಫ್ ಇಂಡಿಯಾ

4)ಭಾರತದ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ‘ಅವಿಶ್ರಾಂತ ಪಿತಾಮಹ’ (valentine chirol) ಎಂದು ಯಾರನ್ನು ಕರೆಯಲಾಗುತ್ತಿತ್ತು?
a) ಬಿಪಿನ್ ಚಂದ್ರಪಾಲ್       
b) ಭಗತ್ ಸಿಂಗ್
c) ಅರವಿಂದ್ ಘೋಷ್         
d) ಬಾಲಗಂಗಾಧರ್ ತಿಲಕ್

5) 1942ರಲ್ಲಿ ಜಪಾನ್ ದೇಶದ ಟೋಕಿಯೋದಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸ್ಥಾಪನೆಯಾಯಿತು. ಇದನ್ನು ಯಾರು ಸ್ಥಾಪಿಸಿದರು?
a) ಸುಭಾಷ್ ಚಂದ್ರ ಬೋಸ್    
b) ರಾಜೇಂದ್ರ ಪ್ರಸಾದ್
c) ಅಬುಲ್ ಕಲಾಂ ಆಜಾದ್    
d) ರಾಸ್ ಬಿಹಾರಿ ಬೋಸ್

6) 1897ರಲ್ಲಿ ಸ್ವಾಮಿ ವಿವೇಕಾನಂದರು ಕೋಲ್ಕತ್ತಾದ ಸಮೀಪ ಬೇಲೂರಿನಲ್ಲಿ ಸ್ಥಾಪನೆ ಮಾಡಿದ ಧಾರ್ಮಿಕ ಮಿಷನ್ ಯಾವುದು?
a) ಹಿಂದೂ ವಿರಾಟ್ ಮಿಷನ್  
b) ಸತ್ಯಶೋಧನಾ ಸಮಿತಿ
c) ರಾಮಕೃಷ್ಣ ಮಿಷನ್           
d) ಸರ್ವಧರ್ಮ ಸಮಿತಿ

7) ಹಿಂದೂ ಧರ್ಮದಲ್ಲಿದ ಅನಿಷ್ಠ ಪದ್ಧತಿಗಳನ್ನು ತೊಲಗಿಸಲು ಕೇಶವ್ ಚಂದ್ರಸೇನ್ ಸ್ಥಾಪನೆ ಮಾಡಿದ ಸೇವಾ ಸಂಸ್ಥೆ ಯಾವುದು?
a) ಬಹ್ಮ ಸಮಾಜ
b) ಆದಿ ಬ್ರಹ್ಮ ಸಮಾಜ
c) ಆರ್ಯ ಸಮಾಜ
d) ಪ್ರಾರ್ಥನಾ ಸಮಾಜ

8)  ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು ಯಾರು?
a) ಮಹಾತ್ಮ ಗಾಂಧಿ
b) ಜವಾಹರಲಾಲ್ ನೆಹರೂ
c) ಜೆ.ಬಿ. ಕೃಪಲಾನಿ 
d) ಎಸ್. ರಾಧಕೃಷ್ಣನ್

9) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಗೆ ರೈತರು ತೆರಿಗೆ ನೀಡುವುದಿಲ್ಲ ಎಂಬ ಹೋರಾಟವನ್ನು ಖೈರಾದಲ್ಲಿ ಆರಂಭಿಸಿದರು. ಈ ಖೈರಾ ಯಾವ ರಾಜ್ಯದಲ್ಲಿದೆ ?
a) ಗುಜರಾತ್   
b) ರಾಜಸ್ತಾನ
c) ಬಿಹಾರ
d) ಮಹಾರಾಷ್ಟ್ರ


10) 1919ನೇ ಏಪ್ರಿಲ್ 13ರಂದು ಪಂಜಾಬ್ ರಾಜ್ಯದಲ್ಲಿ ಬೈಸಾಕಿಯಂದು ಜಲಿಯನ್‌ವಾಲಾಬಾಗ್ ದುರಂತ ಸಂಭವಿಸಿತು. ಪಂಜಾಬಿಭಾಷೆಯಲ್ಲಿ ಬೈಸಾಕಿ ದಿನ ಎಂದರೆ ಏನು?
a) ನೋವಿನ ದಿನ 
b) ಹೊಸ ವರ್ಷದ ದಿನ
c) ವರ್ಷದ ಕೊನೆಯ ದಿನ 
d) ಯಾವುದು ಅಲ್ಲ

ಉತ್ತರಗಳು: 1-b, 2-a, 3-a, 4-d, 5-d, 6-c, 7-b, 8-c, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT