ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
1)  ತಮಿಳಿನ ಖ್ಯಾತ ಲೇಖಕ ಪೆರುಮಾಳ್ ಮುರುಗನ್‌ ಅವರ ‘ಮಾದೋರಭಾಗನ್‌’ ಕಾದಂಬರಿಯ ಇಂಗ್ಲಿಷ್‌ ಅನುವಾದಿತ ಕೃತಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಆಕಾಡೆಮಿಯ ಭಾಷಾಂತರ  ಪ್ರಶಸ್ತಿ ಸಂದಿದೆ. ಇಂಗ್ಲಿಷ್‌ನಲ್ಲಿರುವ ಆ ಕೃತಿಯ ಹೆಸರು ಏನು?  
a) One part women     b) Bridge
c)  The spot light                d) win
 
2) ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೂ  ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವ ಸಂದರ್ಭದಲ್ಲಿ ಎದ್ದುನಿಲ್ಲದಿರಲು ಈ ಕೆಳಕಂಡ ಯಾರಿಗೆ  ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿದೆ?   
 a)  ಅಲ್ಪಸಂಖ್ಯಾತರು       b) ಅಂಗವಿಕಲರು 
 c) ವಿದೇಶಿಯರು            d) ಮೇಲಿನ ಎಲ್ಲರು
 
3) ‘ಟಿ20’ ಮಾದರಿ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊಟ್ಟ ಮೊದಲ ಕ್ರಿಕೆಟಿಗ ಯಾರು?     
a) ಡೇವಿಡ್‌ ವಾರ್ನರ್‌      b) ಮೆಕ್ಕಲಂ
c) ಕ್ರಿಸ್‌ ಗೇಯ್ಲ್               d)  ವಿರಾಟ್‌ ಕೊಹ್ಲಿ
 
4) ಇತ್ತೀಚೆಗೆ ಆಸ್ಟ್ರೇಲಿಯಾ ಸರ್ಕಾರ ತನ್ನ ವೀಸಾ ನೀತಿಯನ್ನು ಬದಲಾಯಿಸಿ, ಈ ಕೆಳಕಂಡ ಯಾವ ವೀಸಾವನ್ನು ರದ್ದುಪಡಿಸಿದೆ? 
a) ವೀಸಾ– ಎಚ್‌1 ಬಿ1      b) ವೀಸಾ– 754  
c) ವೀಸಾ–652       d) ವೀಸಾ 457
 
5)  ಧ್ವನಿವ್ಯವಸ್ಥೆಯ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ‘ವಿಶ್ವ ಧ್ವನಿ ದಿನ’ ವನ್ನು  ಈ ಕೆಳಕಂಡ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ. ?  
a) ಏಪ್ರಿಲ್ 16           b) ಏಪ್ರಿಲ್  17 
c) ಏಪ್ರಿಲ್ 18           d)  ಏಪ್ರಿಲ್ 19
 
6) ‘ಡಾ.ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ ಸಂಸ್ಥೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತ್ತೀಚೆಗೆ ಚಾಲನೆ ನೀಡಿದರು. ಈ ಸಂಸ್ಥೆ ರಾಜ್ಯದ ಯಾವ ನಗರದಲ್ಲಿದೆ?   
a)ಮೈಸೂರು             b) ಮಂಗಳೂರು
c) ಬೆಂಗಳೂರು         d) ಬೆಳಗಾವಿ
 
7)  ಎಚ್‍ಐವಿ ಪೀಡಿತ ಜನರ ಹಕ್ಕುಗಳನ್ನು ಸಂರಕ್ಷಿಸುವ ಬದ್ಧತೆ ಹೊಂದಿರುವ ಎಚ್‍ಐವಿ, ಏಡ್ಸ್ ನಿಯಂತ್ರಣ ಕಾಯ್ದೆಯನ್ನು ದಕ್ಷಿಣ ಏಷ್ಯಾದಲ್ಲೇ ಮೊಟ್ಟ ಮೊದಲ ಬಾರಿಗೆ  ಜಾರಿಗೆ ತಂದ ದೇಶ ಯಾವುದು? 
a) ಪಾಕಿಸ್ತಾನ            b) ಶ್ರೀಲಂಕಾ
c) ಭಾರತ d) ಬಾಂಗ್ಲಾದೇಶ
 
8) ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಡೆದ  ಚಂಪಾರಣ್ಯ ಸತ್ಯಾಗ್ರಹಕ್ಕೆ ಇತ್ತೀಚೆಗಷ್ಟೆ ನೂರು ವರ್ಷ ತುಂಬಿತು. ಈ ಚಂಪಾರಣ್ಯ ಯಾವ ರಾಜ್ಯದಲ್ಲಿ ಬರುತ್ತದೆ?  
a) ಮಧ್ಯಪ್ರದೇಶ        b) ಚತ್ತೀಸ್‌ಗಢ 
c) ಒಡಿಶಾ                d) ಬಿಹಾರ
 
9) ಮಧ್ಯಪ್ರದೇಶ ಸರ್ಕಾರ ಇತ್ತೀಚೆಗೆ  ‘ದೀನದಯಾಳ್ ಅಂತ್ಯೋದಯ ರಸೋಯಿ’ ಎಂಬ ವಿನೂತನ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯ ಅನುಸಾರ ನಾಗರಿಕರಿಗೆ ಏನು ದೊರೆಯಲಿದೆ?
a)  ಸಬ್ಸಿಡಿ ದರದಲ್ಲಿ ಊಟ  
b) ರಿಯಾಯ್ತಿ ದರದಲ್ಲಿ ಆಹಾರ ಪದಾರ್ಥಗಳು
c) ಸಬ್ಸಿಡಿ ದರದಲ್ಲಿ ಉಡುಪು  
d)  ರಿಯಾಯ್ತಿ ದರದಲ್ಲಿ ಬೀಜ ಮತ್ತು ರಸಗೊಬ್ಬರ

10) ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆಯನ್ನು  ಸಂವಿಧಾನದ ಎಷ್ಟನೇ ತಿದ್ದುಪಡಿ ಮೂಲಕ ಜಾರಿಗೆ ತರಲಾಗುತ್ತಿದೆ?
a) 122ನೇ ತಿದ್ದುಪಡಿ    b) 123ನೇ ತಿದ್ದುಪಡಿ
c) 124ನೇ ತಿದ್ದುಪಡಿ    d) 125ನೇ ತಿದ್ದುಪಡಿ
 
ಉತ್ತರಗಳು: 1–a, 2–b, 3–c, 4–d, 5–a, 6–c, 
7–c, 8–d,  9–a, 10–a 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.