ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 15,000ರನ್: ದಿಗ್ಗಜರನ್ನು ಹಿಂದಿಕ್ಕಿದ ಕೊಹ್ಲಿ

ಪಿಟಿಐ
Published 2 ಅಕ್ಟೋಬರ್ 2017, 20:08 IST
Last Updated 2 ಅಕ್ಟೋಬರ್ 2017, 20:08 IST
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ  ವೇಗವಾಗಿ 15,000ರನ್: ದಿಗ್ಗಜರನ್ನು ಹಿಂದಿಕ್ಕಿದ ಕೊಹ್ಲಿ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 15,000ರನ್: ದಿಗ್ಗಜರನ್ನು ಹಿಂದಿಕ್ಕಿದ ಕೊಹ್ಲಿ   

ಬೆಂಗಳೂರು: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಕ್ರಿಕೆಟ್‌ ಲೋಕದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ವಿರಾಟ್‌, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 15,000 ರನ್‌ ಪೂರೈಸಿದ ಮೊದಲ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ, ಜಾಕ್‌ ಕಾಲಿಸ್‌, ವೆಸ್ಟ್‌ ಇಂಡೀಸ್‌ನ ವಿವಿಯನ್‌ ರಿಚರ್ಡ್ಸ್‌, ಬ್ರಯನ್‌ ಲಾರಾ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌, ರಿಕಿ ಪಾಂಟಿಂಗ್‌, ಪಾಕಿಸ್ತಾನದ ಮಹಮ್ಮದ್‌ ಯೂಸುಫ್‌, ಜಾವೆದ್‌ ಮಿಯಂದಾದ್‌ ಮತ್ತು ಭಾರತದ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಐದನೇ ಏಕದಿನ ಪಂದ್ಯದ ಅಂತ್ಯಕ್ಕೆ ಒಟ್ಟು 334 ಇನಿಂಗ್ಸ್‌ಗಳನ್ನು ಆಡಿರುವ ವಿರಾಟ್‌, ಟೆಸ್ಟ್‌ (4,658), ಏಕದಿನ (8,767) ಮತ್ತು ಟಿ–20 (1,830) ಸೇರಿದಂತೆ ಒಟ್ಟಾರೆ 15,255ರನ್‌ಗಳನ್ನು ಕಲೆಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.