ADVERTISEMENT

ಅಗ್ರಸ್ಥಾನಕ್ಕೇರಿದ ಭಾರತ

ಪಿಟಿಐ
Published 2 ಅಕ್ಟೋಬರ್ 2017, 20:04 IST
Last Updated 2 ಅಕ್ಟೋಬರ್ 2017, 20:04 IST
ಅಗ್ರಸ್ಥಾನಕ್ಕೇರಿದ ಭಾರತ
ಅಗ್ರಸ್ಥಾನಕ್ಕೇರಿದ ಭಾರತ   

ದುಬೈ: ಆಸ್ಟ್ರೇಲಿಯಾ ವಿರು ದ್ಧದ ಐದನೇ ಪಂದ್ಯದಲ್ಲಿ ಜಯದ ಸಿಹಿ ಸವಿದಿದ್ದ ಭಾರತ ತಂಡ ಐಸಿಸಿ ಏಕದಿನ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಸೋಮವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಒಟ್ಟು ರೇಟಿಂಗ್‌ ಪಾಯಿಂಟ್ಸ್‌ ಅನ್ನು 120ಕ್ಕೆ ಹೆಚ್ಚಿಸಿಕೊಂಡಿರುವ ವಿರಾಟ್‌ ಕೊಹ್ಲಿ ಬಳಗ, ದಕ್ಷಿಣ ಆಫ್ರಿಕಾ (119) ತಂಡವನ್ನು ಹಿಂದಿಕ್ಕಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಗೆದ್ದ ನಂತರ ಭಾರತ ಅಗ್ರಪಟ್ಟಕ್ಕೇರಿತ್ತು. ಬೆಂಗಳೂರಿನಲ್ಲಿ ನಡೆದ ನಾಲ್ಕನೇ ಹಣಾಹಣಿಯಲ್ಲಿ ಸೋತಿದ್ದರಿಂದ ಮತ್ತೆ ಎರಡನೇ ಸ್ಥಾನಕ್ಕೆ ಕುಸಿದಿತ್ತು.

ADVERTISEMENT

ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ: ಬ್ಯಾಟ್ಸ್‌ಮನ್‌ಗಳ ವಿಶ್ವಕ್ರಮಾಂಕ ಪಟ್ಟಿ ಯಲ್ಲಿ  ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ರೋಹಿತ್‌ ಶರ್ಮಾ ಐದನೇ ಸ್ಥಾನ ಮರಳಿ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಟ್ಟು 296ರನ್‌ ಕಲೆಹಾಕಿದ್ದ ಅವರು ನಾಲ್ಕು ಸ್ಥಾನಗಳಲ್ಲಿ ಬಡ್ತಿ ಕಂಡಿದ್ದಾರೆ. ರೋಹಿತ್‌ 790 ರೇಟಿಂಗ್‌ ಪಾಯಿಂಟ್ಸ್‌ ಸಂಗ್ರಹಿಸಿ ದ್ದಾರೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಸತತ ನಾಲ್ಕು ಅರ್ಧಶತಕ ದಾಖಲಿಸಿ ಮಿಂಚಿದ್ದ ಅಜಿಂಕ್ಯ ರಹಾನೆ 24ನೇ ಸ್ಥಾನಕ್ಕೇರಿದ್ದಾರೆ. ಕೇದಾರ್‌ ಜಾಧವ್‌ 36ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಬೌಲರ್‌ಗಳ ಕ್ರಮಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ಅಕ್ಷರ್‌ ಪಟೇಲ್ ಏಳನೇ ಸ್ಥಾನಕ್ಕೇರಿದ್ದಾರೆ. ಇದು ಅವರು ಕ್ರೀಡಾ ಬದುಕಿನ ಶ್ರೇಷ್ಠ ಸಾಧನೆ ಎನಿಸಿದೆ.

ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರು ಕ್ರಮವಾಗಿ 75 ಮತ್ತು 80ನೇ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.