ADVERTISEMENT

ಅಚ್ಚರಿ ಮೂಡಿಸಿದ ಪೇಸ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 19:51 IST
Last Updated 6 ಏಪ್ರಿಲ್ 2013, 19:51 IST

ಬೆಂಗಳೂರು: ಮಹತ್ವದ ವಿದ್ಯಮಾನವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರರ ಸಂಘ (ಐಟಿಪಿಎ) ಅಸ್ತಿತ್ವಕ್ಕೆ ಬಂದಿದ್ದು, ಲಿಯಾಂಡರ್ ಪೇಸ್ ಕೂಡ ಜೊತೆಗೂಡಲು ಒಪ್ಪಿಗೆ ಸೂಚಿಸಿದ್ದಾರೆ.

ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ವಿರುದ್ಧ ಕೆಲ ಆಟಗಾರರು ಬಂಡಾಯ ಎದ್ದಿದ್ದ ಸಮಯದಲ್ಲಿಯೇ ಇಂಥ ಸಂಘವೊಂದನ್ನು ಸ್ಥಾಪಿಸಲು ಮುಂದಾಗಲಾಗಿತ್ತು. ಈ ಸಂಬಂಧ ಹಿರಿಯ ಹಾಗೂ ಹಾಲಿ ಆಟಗಾರರು ಸಮಾಲೋಚನೆಯಲ್ಲಿ ತೊಡಗಿದ್ದರು. ಅದು ಶನಿವಾರ ರಾತ್ರಿ ಕಾರ್ಯರೂಪಕ್ಕೆ ಬಂದಿದೆ.

ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ಸಂಘದ ಮೊದಲ ವಾರ್ಷಿಕ ಮಹಾಸಭೆಯಲ್ಲಿ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಚೆನ್ನೈನ್ಲ್ಲಲಿ ಈ ಯೋಜನೆ ಮೂಡಿಬಂದಾಗ ಪೇಸ್ ಇದರ ಭಾಗವಾಗಿರಲಿಲ್ಲ. ಅವರು ಎಐಟಿಎ ಪರ ಇದ್ದರು. ಆದರೆ ಈಗ ಒಮ್ಮೆಲೇ ಈ ಸಂಘದ ಭಾಗವಾಗಲು ಒಪ್ಪಿರುವುದು ಅಚ್ಚರಿಗೆ ಕಾರಣವಾಗಿದೆ.

`ಭಾರತದ ಎಲ್ಲಾ ಆಟಗಾರರು ಒಟ್ಟಿಗಿದ್ದೇವೆ. ಸಂಘದೊಂದಿಗೆ ಕಾರ್ಯ ನಿರ್ವಹಿಸಲು ಪ್ರಮುಖ ಆಟಗಾರರು ಸಹಿ ಮಾಡಿದ್ದಾರೆ. ಲಿಯಾಂಡರ್ ಕೂಡ ಈ ಸಂಘದ ಪ್ರಮುಖ ಭಾಗವಾಗಿದ್ದಾರೆ' ಎಂದು ಸಂಘದ ಕಾರ್ಯದರ್ಶಿ ಕಾರ್ತಿ ಚಿದಂಬರಂ ತಿಳಿಸಿದರು.
`ಎಐಟಿಎ ವಿರುದ್ಧವಾಗಿ ಈ ಸಂಘ ಕಟ್ಟಿಲ್ಲ. ಅವರ ಜೊತೆ         ಜಗಳವಾಡುವ ಉ್ದ್ದದೇಶವೂ ನಮಗಿಲ್ಲ. ಎಐಟಿಎಗೆ ಪರ್ಯಾಯ ಸಂಸ್ಥೆ ಇದಲ್ಲ. ಆದರೆ ಆಟಗಾರರಿಗೆ ವೇದಿಕೆ ಮಾಡಿಕೊಡಬೇಕು' ಎಂದರು.

`ಭಾರತದಲ್ಲಿ ಟೆನಿಸ್ ಸುಧಾರಣೆ ಈ ಸಂಘದ ಮುಖ್ಯ ಉದ್ದೇಶ. ಆಟಗಾರರಿಗೆ ಪರಸ್ಪರ ಸಹಾಯ, ಮಾರ್ಗದರ್ಶನ ನೀಡುವುದು ಇದರ ಕೆಲಸ. ಪಾರದರ್ಶಕವಾಗಿ ಕೆಲಸ ಮಾಡಲಿದೆ. ಏನು ಮಾಡುತ್ತೇವೆ ಎಂಬುದು ಎಲ್ಲರಿಗೂ          ಗೊತ್ತಾಗಲಿದೆ. ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ' ಎಂದು ಸೋಮದೇವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.