ADVERTISEMENT

ಆನಂದ ಪಟ್ಟಿಗೆ ಸಚಿನ್‌ ಚಿತ್‌

ಕಿತ್ತೂರು ಉತ್ಸವದ ಅಂಗವಾಗಿ ನಡೆದ ಕುಸ್ತಿ: ಪ್ರೇಮಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 19:50 IST
Last Updated 25 ಅಕ್ಟೋಬರ್ 2017, 19:50 IST
ಕಿತ್ತೂರಿನಲ್ಲಿ ಬುಧವಾರ ನಡೆದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗಳನ್ನು ನೋಡಲು ಸೇರಿದ್ದ ಕುಸ್ತಿ ಪ್ರೇಮಿಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌
ಕಿತ್ತೂರಿನಲ್ಲಿ ಬುಧವಾರ ನಡೆದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗಳನ್ನು ನೋಡಲು ಸೇರಿದ್ದ ಕುಸ್ತಿ ಪ್ರೇಮಿಗಳು –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್‌   

ಚನ್ನಮ್ಮನ ಕಿತ್ತೂರು: ಕರ್ನಾಟಕದ ಆನಂದ ಹೊಳಿಹಡಗಲಿ, ಲೀನಾ ಸಿದ್ದಿ ಹಳಿಯಾಳ, ಪ್ರೇಮಾ ಹುಚ್ಚಣ್ಣನವರ ಮತ್ತು ಲಕ್ಷ್ಮಿ ಪಾಟೀಲ ಅವರು ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಬುಧವಾರ ನಡೆದ ರಾಷ್ಟ್ರಮಟ್ಟದ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಪುರುಷರ ಮೊದಲ ಜೋಡಿಯ ಪೈಪೋಟಿಯಲ್ಲಿ ಉತ್ತರ ಪ್ರದೇಶದ ವರುಣ್ ಕುಮಾರ್‌ ಪಂಜಾಬ್‌ನ ಗುರುಲಾಲ್‌ ಸಿಂಗ್‌ ಅವರನ್ನು ಚಿತ್‌ ಮಾಡಿದರು. ಎರಡನೇ ಜೋಡಿಯ ಸ್ಪರ್ಧೆಯಲ್ಲಿ ಚಂಡಿಗಡದ ಪ್ರವೀಣ ಕುಮಾರ ಡಾಗರ ಮಹಾರಾಷ್ಟ್ರದ ಕುರುದ ವಾಡಿಯ ಸುನೀಲ ಸೇವತಕರ ಎದುರು ಜಯ ಪಡೆದರು.

ಮೂರನೇ ಜೋಡಿಯ ಹೋರಾಟ ದಲ್ಲಿ ಮಹಾರಾಷ್ಟ್ರದ ಸಚಿನ್ ನಾರೆ ಅವರನ್ನು ಮಣಿಸಿದ ಕಿತ್ತೂರಿನ ಆನಂದ ಹೊಳಿಹಡಗಲಿ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.