ADVERTISEMENT

ಆರ್ಚರಿ: ಭಾರತ ಮಹಿಳೆಯರಿಗೆ ಕಂಚು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಕೋಲ್ಕತ್ತ (ಪಿಟಿಐ): ಭಾರತ ಮಹಿಳೆಯರ ತಂಡದವರು ಇರಾನ್‌ನ ಟೆಹರಾನ್‌ನಲ್ಲಿ ನಡೆದ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ರಿಕರ್ವ್ ಮತ್ತು ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಆದರೆ ಪುರುಷರು ನಿರಾಸೆ ಅನುಭವಿಸಿದರು.

ದೀಪಿಕಾ ಕುಮಾರಿ, ಚೆಕ್ರವೊಲು ಸ್ವರೊ ಮತ್ತು ಲೈಶ್‌ರಾಮ್ ಬೊಂಬಲ್ಯ ದೇವಿ ಅವರನ್ನೊಳಗೊಂಡ ಭಾರತ ಮಹಿಳಾ ತಂಡ ರಿಕರ್ವ್ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 190-175 ರಲ್ಲಿ ಚೀನಾ ವಿರುದ್ಧ ಜಯ ಸಾಧಿಸಿತು. ಜಪಾನ್ ತಂಡ ಚಿನ್ನ ಗೆದ್ದಕೊಂಡಿತು.

ಕಾಂಪೌಂಡ್ ವಿಭಾಗದಲ್ಲಿ ಜಾನೊ ಹಂಸ್ದಾ, ಮಂಜುದಾ ಸೊಯ್ ಮತ್ತು ಜ್ಯೋತಿ ವಿ ಸುರೇಖಾ ಅವರನ್ನೊಳಗೊಂಡ ಭಾರತ 208-203 ರಲ್ಲಿ ಇರಾನ್ ತಂಡವನ್ನು ಮಣಿಸಿ ಕಂಚು ಪಡೆಯಿತು. ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಇಂಡೊನೇಷ್ಯ ಎದುರು ಸೋಲು ಅನುಭವಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.