ADVERTISEMENT

ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ರಾಜ್ಯಮಟ್ಟದ ಕಿರಿಯರ ವೇಟ್‌ಲಿಫ್ಟಿಂಗ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ದಾವಣಗೆರೆ: ಮೂಡುಬಿದಿರೆಯ ಆಳ್ವಾಸ್ ಕಾಲೇಜು ತಂಡಗಳು, ನಗರದ ಕೆಇಬಿ  ಸಮುದಾಯ ಭವನದಲ್ಲಿ ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆ, ಗ್ರೂಪ್ ಆಫ್ ಐರನ್ ಗೇಮ್ ಆಶ್ರಯದಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯ ಮಟ್ಟದ ಕಿರಿಯರ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಾಬಲ್ಯ ಮುಂದುವರಿಸಿ ಪುರುಷರ ಹಾಗೂ ಮಹಿಳೆಯರ ವಿಭಾಗದ ತಂಡ ಪ್ರಶಸ್ತಿ ತಮ್ಮದಾಗಿಸಿಕೊಂಡವು.

ಮೂಡುಬಿದಿರೆ ಕಾಲೇಜಿನ ತಂಡ ಪುರುಷರ ವಿಭಾಗದಲ್ಲಿ 354 ಹಾಗೂ ಮಹಿಳೆಯರ ವಿಭಾಗದಲ್ಲಿ 353 ಅಂಕಗಳನ್ನು ಸಂಗ್ರಹಿಸಿತು. 280 ಅಂಕ ಗಳಿಸಿದ ದಾವಣಗೆರೆಯ ನಗರಪಾಲಿಕೆ ಜಿಮ್ ಮತ್ತು ಮಹಿಳೆಯರ ವಿಭಾಗದಲ್ಲಿ ವೆಂಕಟನಾರಾಯಣ ಮಹಿಳಾ ಕಾಲೇಜು (139 ಅಂಕ) 2ನೇ ಸ್ಥಾನ ಪಡೆದವು.

ಉಜಿರೆಯ ಎಸ್‌ಡಿಎಂ ಕ್ರೀಡಾ ಕ್ಲಬ್‌ನ ಹರ್ಷ ಮತ್ತು ಮಹಿಳೆಯರ ವಿಭಾಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕಾಂಚನಾ `ಬೆಸ್ಟ್‌ಲಿಫ್ಟರ್' ಪ್ರಶಸ್ತಿ ಗೆದ್ದುಕೊಂಡರು.

ಕೊನೆಯ ದಿನವಾದ ಭಾನುವಾರ ದಾಖಲೆಗಳು ಮೂಡಿಬರಲಿಲ್ಲ.

ಫಲಿತಾಂಶ ಇಂತಿದೆ.
94 ಕೆ.ಜಿ.: ದಾವಣಗೆರೆ ನಗರಪಾಲಿಕೆ ಜಿಮ್‌ನ ರಾಘವೇಂದ್ರ ಆರ್.ರಾಯ್ಕರ್ (ಸ್ನ್ಯಾಚ್ 92 ಕೆ.ಜಿ., ಕ್ಲೀನ್ ಜರ್ಕ್ 112 ಕೆ.ಜಿ., ಒಟ್ಟು 204 ಕೆ.ಜಿ.)-1, ಆಳ್ವಾಸ್ ಕಾಲೇಜಿನ ಮಲ್ಲದೇವರು (ಸ್ನ್ಯಾಚ್ 85 ಕೆ.ಜಿ., ಕ್ಲೀನ್ ಜರ್ಕ್ 110 ಕೆ.ಜಿ., ಒಟ್ಟು 195 ಕೆ.ಜಿ.)-2, ಯತೀಶ್ ಶೆಟ್ಟಿ (ಸ್ನ್ಯಾಚ್ 75 ಕೆ.ಜಿ., ಕ್ಲೀನ್ ಜರ್ಕ್ 95, ಒಟ್ಟು 170 ಕೆ.ಜಿ.)-3.

105 ಕೆ.ಜಿ.: ಆಳ್ವಾಸ್ ಕಾಲೇಜಿನ ಅರ್ಜನ್ ಕಿರಣ್ (ಸ್ನ್ಯಾಚ್ 85 ಕೆ.ಜಿ., ಕ್ಲೀನ್ ಜರ್ಕ್ 107 ಕೆ.ಜಿ., ಒಟ್ಟು 192 ಕೆ.ಜಿ.)-1, ಉಜಿರೆಯ ಎಸ್‌ಡಿಎಂ ಕಾಲೇಜಿನ ಎಸ್.ಪ್ರೀತಂ (ಸ್ನ್ಯಾಚ್ 85 ಕೆ.ಜಿ., ಕ್ಲೀನ್ ಜರ್ಕ್ 108, ಒಟ್ಟು 188 ಕೆ.ಜಿ.)-2,  ಧವಳಾ ಕಾಲೇಜಿನ ವಿಶ್ರುತ್ ಜೈನ್ (ಸ್ನ್ಯಾಚ್ 78 ಕೆ.ಜಿ., ಕ್ಲೀನ್ ಜರ್ಕ್ 96, ಒಟ್ಟು 174 ಕೆ.ಜಿ.)-3.

ಪ್ಲಸ್ 105 ಕೆ.ಜಿ.: ಆಳ್ವಾಸ್ ಕಾಲೇಜಿನ ಸೌಜನ್ (ಸ್ನ್ಯಾಚ್ 95 ಕೆ.ಜಿ., ಕ್ಲೀನ್ ಜರ್ಕ್ 117 ಕೆ.ಜಿ., ಒಟ್ಟು 212 ಕೆ.ಜಿ.)-1, ಉಜಿರೆ ಎಸ್‌ಡಿಎಂ ಕ್ರೀಡಾ ಕ್ಲಬ್‌ನ ಪೃಥ್ವಿರಾಜ್ (ಸ್ನ್ಯಾಚ್ 80 ಕೆ.ಜಿ., ಕ್ಲೀನ್ ಜರ್ಕ್ 105 ಕೆ.ಜಿ., ಒಟ್ಟು 185 ಕೆ.ಜಿ.)-2, ಆಳ್ವಾಸ್ ಕಾಲೇಜಿನ ಅವಿಲ್ (ಸ್ನ್ಯಾಚ್ 80 ಕೆ.ಜಿ., ಕ್ಲೀನ್ ಜರ್ಕ್ 90 ಕೆ.ಜಿ., ಒಟ್ಟು 170 ಕೆ.ಜಿ.)-3.

ಮಹಿಳೆಯರ ವಿಭಾಗ:
48 ಕೆ.ಜಿ.: ಆಳ್ವಾಸ್ ಕಾಲೇಜಿನ ಮರೀನಾ-1, ಬಂಟ್ವಾಳ ವೆಂಕಟರಮಣ ಕಾಲೇಜಿನ ಮಮತಾ-2, ಆಳ್ವಾಸ್ ಕಾಲೇಜಿನ ಶೋಧನಾ-3.

53 ಕೆ.ಜಿ.: ಆಳ್ವಾಸ್ ಕಾಲೇಜಿನ ಸುಷ್ಮಿತಾ ಶೆಟ್ಟಿ-1, ಪರ್ವಿನ್ -2, ಬಂಟ್ವಾಳ ವೆಂಕಟರಮಣ ಮಹಿಳಾ ಕಾಲೇಜಿನ ಸಪ್ನಾ ಶೆಟ್ಟಿ-3.

58 ಕೆ.ಜಿ.: ಆಳ್ವಾಸ್ ಕಾಲೇಜಿನ ಗೀತಾ ಸೇಥಿ-1, ವೆಂಕಟರಮಣ ಕಾಲೇಜಿನ ಸ್ವಾತಿ-2, ಆಳ್ವಾಸ್ ಕಾಲೇಜಿನ ಕೀರ್ತಿಕಾ-3.

63 ಕೆ.ಜಿ.: ಆಳ್ವಾಸ್ ಕಾಲೇಜಿನ ಶ್ರುತಿ-1, ಚೈತ್ರಾ-2, ಮಂಗಳೂರು ಡಿಸಿಸಿ ಕಾಲೇಜಿನ ಎಲ್.ಕೆ.ಪುಷ್ಪಲತಾ-3.

69 ಕೆ.ಜಿ.: ಆಳ್ವಾಸ್ ಕಾಲೇಜಿನ ಜಯಶ್ರೀ-1, ಅಕ್ಷತಾ-2, ಮಂಗಳೂರು ಡಿಸಿಸಿಯ ನಮ್ರತಾ ಎನ್.ಗಾಣಿಗ-3.

75 ಕೆ.ಜಿ.: ಮಂಗಳೂರಿನ ಡಿಸಿಸಿಯ ಸುಪ್ರಿತಾ-1, ಆಳ್ವಾಸ್ ಕಾಲೇಜಿನ ವಚನಾ-2, ಉಷಾ-3.

75 ಕೆ.ಜಿ.ಮೇಲ್ಪಟ್ಟು: ಎಸ್‌ಎಐನ ಕಾಂಚನಾ-1, ಆಳ್ವಾಸ್ ಕಾಲೇಜಿನ ದಿವ್ಯಶ್ರೀ-2, ಮೂಡುಬಿದಿರೆಯ ಧವಳಾ ಕಾಲೇಜಿನ ಸ್ಮಿತಾ-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.