ADVERTISEMENT

ಇಂಗ್ಲೆಂಡ್‌ಗೆ ಚಿಲಿ ತಂಡದ ಸವಾಲು

ಪಿಟಿಐ
Published 7 ಅಕ್ಟೋಬರ್ 2017, 19:53 IST
Last Updated 7 ಅಕ್ಟೋಬರ್ 2017, 19:53 IST
ಇಂಗ್ಲೆಂಡ್‌ಗೆ ಚಿಲಿ ತಂಡದ ಸವಾಲು
ಇಂಗ್ಲೆಂಡ್‌ಗೆ ಚಿಲಿ ತಂಡದ ಸವಾಲು   

ಕೋಲ್ಕತ್ತ: ಪ್ರತಿಭಾನ್ವಿತ ಆಟಗಾರರ ಕಣಜ ಎನಿಸಿರುವ ಇಂಗ್ಲೆಂಡ್‌ ತಂಡದವರು ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾನುವಾರ ಚಿಲಿ ತಂಡದ ಸವಾಲಿಗೆ ಎದೆಯೊಡ್ಡಲಿದ್ದಾರೆ.

ಉಭಯ ತಂಡಗಳ ನಡುವಣ ಹೋರಾಟ ಫುಟ್‌ಬಾಲ್‌ ಪ್ರೇಮಿಗಳ ನಗರ ಕೋಲ್ಕತ್ತದ ಸಾಲ್ಟ್‌ಲೇಕ್‌
ಕ್ರೀಡಾಂಗಣದಲ್ಲಿ ನಡೆಯಲಿದೆ. ಒಂದು ವರ್ಷ ಎಂಟು ತಿಂಗಳ ಬಳಿಕ ಈ ಮೈದಾನದಲ್ಲಿ ಅಂತರರಾಷ್ಟ್ರೀಯ ಪಂದ್ಯ ಜರುಗುತ್ತಿದೆ.

ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ  ಗುಣಮಟ್ಟದ ಆಟ ಆಡಿ ಗಮನ ಸೆಳೆದಿದ್ದ ಆಂಗ್ಲರ ನಾಡಿನ ತಂಡ ಚಿಲಿ ವಿರುದ್ಧ ಸುಲಭ ಜಯದ ಕನವರಿಕೆಯಲ್ಲಿದೆ.

ADVERTISEMENT

ಇಂಗ್ಲೆಂಡ್‌ ತಂಡದಲ್ಲಿರುವ ಏಂಜೆಲ್‌ ಗೋಮೆಸ್‌ ಮತ್ತು ಜೇಡನ್‌ ಸ್ಯಾಂಚೊ ಅವರು ಬೊರಷ್ಯಾ ಡಾರ್ಟ್‌ಮಂಡ್‌ ಕ್ಲಬ್‌ ಪರ ಆಡಿದ ಅನುಭವಿಗಳಾಗಿದ್ದಾರೆ. 16 ವರ್ಷದ ಮಿಡ್‌ಫೀಲ್ಡರ್‌ ಗೋಮೆಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಣಕ್ಕಿಳಿದ ಕಿರಿಯ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಫಿಲ್‌ ಫೊಡೆನ್‌ ಕೂಡ ತಂಡದ ಶಕ್ತಿಯಾ
ಗಿದ್ದಾರೆ.

ಇವರನ್ನು ನಿಯಂತ್ರಿಸಲು ಚಿಲಿ ತಂಡದ ರಕ್ಷಣಾ ವಿಭಾಗದ ಆಟಗಾರರು ಯಾವ ಬಗೆಯ ತಂತ್ರ ಅನುಸರಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಬ್ರೆಜಿಲ್‌ನಲ್ಲಿ ನಡೆದಿದ್ದ ದಕ್ಷಿಣ ಅಮರಿಕ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದು ವಿಶ್ವಕಪ್‌ಗೆ ಅರ್ಹತೆ ಗಳಿಸಿರುವ ಚಿಲಿ ತಂಡ ಅಚ್ಚರಿಯ ಫಲಿತಾಂಶ ನೀಡಲು ಹವಣಿಸುತ್ತಿದೆ.

1993ರ ಕೂಟದಲ್ಲಿ ಮೂರನೇ ಸ್ಥಾನ ಗಳಿಸಿದ್ದ ಈ ತಂಡ ಆ ನಂತರ ಶ್ರೇಷ್ಠ ಸಾಮರ್ಥ್ಯ ತೋರಲು ವಿಫಲವಾಗಿತ್ತು. ಈ ಬಾರಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ತಂಡ ಗೆಲುವಿನೊಂದಿಗೆ ಅಭಿಯಾನ ಆರಂಭಿಸುವ ಆಲೋಚನೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.