ADVERTISEMENT

ಇಂಗ್ಲೆಂಡ್‌ಗೆ ತೆರಳಲಿರುವ ದಿಲ್ಶಾನ್

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:40 IST
Last Updated 2 ಮೇ 2011, 19:40 IST

ಶ್ರೀಲಂಕಾ ತಂಡದ ನೂತನ ನಾಯಕರಾಗಿ ನೇಮಕಗೊಂಡಿರುವ ತಿಲಕರತ್ನೆ ದಿಲ್ಶಾನ್  ಐಪಿಎಲ್ ಅನ್ನು ಅರ್ಧದಲ್ಲೇ ತೊರೆದು ರಾಷ್ಟ್ರೀಯ ತಂಡವನ್ನು ಸೇರಲು ಮೇ 11ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಬಿಸಿಸಿಐ ಹಾಗೂ ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳ ಮಧ್ಯೆ ನಡೆದ ಮಾತುಕತೆ ಕಾಲಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ದಿಲ್ಶಾನ್ ಅರ್ಧದಲ್ಲೇ ಐಪಿಎಲ್ ತೊರೆಯಬೇಕಾಗಿದ್ದರಿಂದ ನಾಲ್ಕು ಗುಂಪು ಪಂದ್ಯಗಳನ್ನಲ್ಲದೆ ನಾಕೌಟ್ ಹಂತದ ಹಣಾಹಣಿಯನ್ನೂ ತಪ್ಪಿಸಿಕೊಳ್ಳಲಿದ್ದಾರೆ. ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಅವರು ಬೆಂಗಳೂರಿನ ರಾಯಲ್ ಚಾಲೆಂಜರ್ಸ್‌ ಪರ ಆಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.