ADVERTISEMENT

ಇಂಡಿಯನ್ಸ್‌ಗೆ ರೋಚಕ ಜಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:13 IST
Last Updated 24 ಏಪ್ರಿಲ್ 2013, 19:13 IST

ಕೋಲ್ಕತ್ತ (ಪಿಟಿಐ): ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು ಕೊನೆಯ ಓವರ್‌ನಲ್ಲಿ 10 ರನ್‌ಗಳು ಬೇಕಿದ್ದವು. ಆದರೆ ಆ ಓವರ್‌ನ ಮೊದಲ ಎಸೆತದಲ್ಲಿಯೇ ಪೊಲಾರ್ಡ್ ಔಟ್. ಒತ್ತಡದ ಪರಿಸ್ಥಿತಿಯಲ್ಲಿ ಕ್ರೀಸ್‌ಗೆ ಬಂದ ಹರಭಜನ್ ತಂಡವನ್ನು ಕೈಬಿಡಲಿಲ್ಲ. ಅವರು ಎತ್ತಿದ ಸಿಕ್ಸರ್ ಹಾಗೂ ರಾಯುಡು ಬಾರಿಸಿದ ಬೌಂಡರಿ ಸಹಾಯದಿಂದ ತಂಡ ರೋಚಕ ಗೆಲುವು ಸಾಧಿಸಿತು. ಡ್ವೆನ್ ಸ್ಮಿತ್ (62; 45 ಎ.) ಆಟವನ್ನೂ ಮರೆಯುವಂತಿಲ್ಲ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ಪೇರಿಸಿತು. ಇದಕ್ಕೆ ಉತ್ತರವಾಗಿ ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ರೈಡರ್ಸ್ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಗಂಭೀರ್ ಜೊತೆ ಇನಿಂಗ್ಸ್ ಆರಂಭಿಸಿದ ಯೂಸುಫ್ ಪಠಾಣ್ (19, 6 ಎಸೆತ, 3 ಬೌಂ, 1 ಸಿಕ್ಸರ್) ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಇಂಡಿಯನ್ಸ್ ಪರ ಬೌಲಿಂಗ್ ಆರಂಭಿಸಿದ ಹರಭಜನ್ ಅವರ ಮೊದಲ ಓವರ್‌ನಲ್ಲಿ 26 ರನ್‌ಗಳ ಬಂದವು.

ಬಳಿಕ ಪ್ರಭಾವಿ ಬೌಲಿಂಗ್ ಮೂಲಕ ಈ ತಂಡವನ್ನು 160ರ ಗಡಿಯೊಳಗೆ ಕಟ್ಟಿಹಾಕಿದ್ದರ ಶ್ರೇಯ ಇಂಡಿಯನ್ಸ್ ಬೌಲರ್‌ಗಳಿಗೆ ಸಲ್ಲಬೇಕು. ಮಿಷೆಲ್ ಜಾನ್ಸನ್ (26ಕ್ಕೆ 2), ಲಸಿತ್ ಮಾಲಿಂಗ (25ಕ್ಕೆ 2) ಮತ್ತು ಪ್ರಗ್ಯಾನ್ ಓಜಾ (21ಕ್ಕೆ 2) ತಲಾ ಎರಡು ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಇಂಡಿಯನ್ಸ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಸಚಿನ್ ಬೇಗನೇ ವಿಕೆಟ್ ಒಪ್ಪಿಸಿದರು. ಆದರೆ ಸ್ಮಿತ್, ರೋಹಿತ್ ಶರ್ಮ ಹಾಗೂ ಪೊಲಾರ್ಡ್ ಬಿರುಸಿನ ಆಟವಾಡಿದರು. ಕೊನೆಯಲ್ಲಿ ಹರಭಜನ್ ಹಾಗೂ ರಾಯುಡು ಗೆಲುವಿನ ರೂವಾರಿ ಎನಿಸಿದರು. 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ಗೆ ಸಹ ಆಟಗಾರರು ಗೆಲುವಿನ ಉಡುಗೊರೆ ನೀಡಿದರು.

ಸ್ಕೋರ್ ವಿವರ :
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159
ಯೂಸುಫ್ ಪಠಾಣ್ ಸಿ ಹರಭಜನ್ ಸಿಂಗ್ ಬಿ ಜಾನ್ಸನ್  19
ಗೌತಮ್ ಗಂಭೀರ್ ಸಿ ಹರಭಜನ್ ಬಿ ಪ್ರಗ್ಯಾನ್ ಓಜಾ  26
ಜಾಕ್ ಕಾಲಿಸ್ ಸಿ ಶರ್ಮ ಬಿ ಪ್ರಗ್ಯಾನ್ ಓಜಾ  37
ಮನೋಜ್ ತಿವಾರಿ ಬಿ ಲಸಿತ್ ಮಾಲಿಂಗ  33
ಎಯೊನ್ ಮಾರ್ಗನ್ ಸಿ ಶರ್ಮ ಬಿ ಮಿಷೆಲ್ ಜಾನ್ಸನ್  31
ದೇವವ್ರತ ದಾಸ್ ಬಿ ಲಸಿತ್ ಮಾಲಿಂಗ  06
ರಜತ್ ಭಾಟಿಯಾ ಔಟಾಗದೆ  01

ಇತರೆ: (ಬೈ-1, ಲೆಗ್‌ಬೈ-3, ವೈಡ್-1, ನೋಬಾಲ್-1)  06
ವಿಕೆಟ್ ಪತನ: 1-27 (ಪಠಾಣ್; 1.1), 2-68 (ಗಂಭೀರ್; 7.6), 3-92 (ಕಾಲಿಸ್; 11.4), 4-146 (ಮಾರ್ಗನ್; 17.6), 5-158 (ತಿವಾರಿ; 19.4), 6-159 (ದಾಸ್; 19.6)
ಬೌಲಿಂಗ್: ಹರಭಜನ್ ಸಿಂಗ್ 2-0-35-0, ಮಿಷೆಲ್ ಜಾನ್ಸನ್ 4-0-26-2, ಲಸಿತ್ ಮಾಲಿಂಗ 4-0-25-2, ಪ್ರಗ್ಯಾನ್ ಓಜಾ 4-0-21-2, ಕೀರನ್ ಪೊಲಾರ್ಡ್ 2-0-14-0, ಯಜ್ವೇಂದ್ರ ಚಾಹಲ್ 4-0-34-0

ಮುಂಬೈ ಇಂಡಿಯನ್ಸ್ 19.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162
ಡ್ವೇನ್ ಸ್ಮಿತ್ ಸಿ ಸಬ್ (ಮೆಕ್ಲಮ್) ಬಿ ಸುನಿಲ್ ನಾರಾಯಣ್  62
ಸಚಿನ್ ತೆಂಡೂಲ್ಕರ್ ಬಿ ಸುನಿಲ್ ನಾರಾಯಣ್  02
ದಿನೇಶ್ ಕಾರ್ತಿಕ್ ಎಲ್‌ಬಿಡಬ್ಲ್ಯು ಬಿ ಸೇನನಾಯಕೆ  07
ರೋಹಿತ್ ಶರ್ಮ ಸಿ ಅಂಡ್ ಬಿ ಸುನಿಲ್ ನಾರಾಯಣ್  34
ಪೊಲಾರ್ಡ್ ಸಿ ಮನೋಜ್ ತಿವಾರಿ ಬಿ ರಜತ್ ಭಾಟಿಯಾ  33
ಅಂಬಟಿ ರಾಯುಡು ಔಟಾಗದೆ  13
ಹರಭಜನ್ ಸಿಂಗ್ ಔಟಾಗದೆ  07
ಇತರೆ (ಲೆಗ್‌ಬೈ-4)  04
ವಿಕೆಟ್ ಪತನ: 1-29 (ಸಚಿನ್; 4.5); 2-64 (ಕಾರ್ತಿಕ್; 7.5); 3-82 (ಸ್ಮಿತ್; 10.6); 4-132 (ರೋಹಿತ್; 16.6); 5-150 (ಪೊಲಾರ್ಡ್; 19.1)

ಬೌಲಿಂಗ್: ಎಲ್.ಬಾಲಾಜಿ 4-0-24-0, ಇಕ್ಬಾಲ್ ಅಬ್ದುಲ್ 4-0-35-0, ಸುನಿಲ್ ನಾರಾಯಣ್ 4-0-17-3, ಸಚಿತ್ರ ಸೇನನಾಯಕೆ 4-0-50-1, ರಜತ್ ಭಾಟಿಯಾ 3.5-0-32-1
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್ ಜಯ.
ಪಂದ್ಯ ಶ್ರೇಷ್ಠ: ಡ್ವೇನ್ ಸ್ಮಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.