ADVERTISEMENT

ಇಂದಿನಿಂದ ಬೆಂಗಳೂರಿನಲ್ಲಿ ಫುಟ್‌ಸಾಲ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಪ್ರೀಮಿಯರ್‌ ಫುಟ್‌ಸಾಲ್‌ ಲೀಗ್‌ ಎರಡನೇ ಆವೃತ್ತಿಯ ಪಂದ್ಯಗಳಿಗಾಗಿ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣವನ್ನು ಸಜ್ಜುಗೊಳಿಸಿರುವುದು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಪ್ರೀಮಿಯರ್‌ ಫುಟ್‌ಸಾಲ್‌ ಲೀಗ್‌ ಎರಡನೇ ಆವೃತ್ತಿಯ ಪಂದ್ಯಗಳಿಗಾಗಿ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣವನ್ನು ಸಜ್ಜುಗೊಳಿಸಿರುವುದು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌   

ಬೆಂಗಳೂರು: ಪ್ರೀಮಿಯರ್‌ ಫುಟ್‌ಸಾಲ್‌ ಲೀಗ್‌ ಎರಡನೇ ಆವೃತ್ತಿಯ ಎರಡನೇ ಲೆಗ್‌ನ ಪಂದ್ಯಗಳು ಮಂಗಳವಾರದಿಂದ ಉದ್ಯಾನನಗರಿಯಲ್ಲಿ ಜರುಗಲಿವೆ.

ಮೊದಲ ದಿನದ ಪ್ರಥಮ ಹಣಾಹಣಿಯಲ್ಲಿ ಆತಿಥೇಯ ಬೆಂಗಳೂರು ರಾಯಲ್ಸ್‌ ತಂಡ ಮುಂಬೈ ವಾರಿಯರ್ಸ್‌ ವಿರುದ್ಧ ಸೆಣಸಲಿದೆ. ಈ ಹೋರಾಟಕ್ಕೆ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ವೇದಿಕೆಯೂ ಸಿದ್ಧವಾಗಿದೆ.

ಈ ಬಾರಿಯ ಲೀಗ್‌ನ ಮೊದಲ ಪಂದ್ಯದಲ್ಲಿ ಕೇರಳ ಕೋಬ್ರಾಸ್‌ ವಿರುದ್ಧ ಗೆದ್ದಿರುವ ಬೆಂಗಳೂರಿನ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ.

ADVERTISEMENT

ನಾಯಕ ಪಾಲ್‌ ಸ್ಕೊಲೆಸ್‌, ಜೊನಾಥನ್‌ ಡಿಸಿಲ್ವಾ, ಪ್ಯಾಟರ್‌ಸನ್‌ ಗೊಮೆಸ್‌ ಮೆಡೆಯಿರೊಸ್‌, ರೆಂಜೊ ಗ್ರಾಸೊ ಮತ್ತು ಅಭಿಷೇಕ್‌ ರಮೇಶ್‌ ಅವರನ್ನು ಹೊಂದಿರುವ ಬೆಂಗಳೂರಿನ ತಂಡ ಮುಂಬೈ ವಿರುದ್ಧವೂ ಮಿಂಚಿನ ಆಟ ಆಡಿ ತವರಿನ ಅಭಿಮಾನಿಗಳನ್ನು ಮೋಡಿ ಮಾಡಲು ಕಾದಿದೆ.

ಮುಂಬೈ ವಾರಿಯರ್ಸ್‌ ತಂಡ ಕೂಡ ತಾನಾಡಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದಿದೆ. ಈ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಹೀಗಾಗಿ ರೋಚಕ ಹೋರಾಟ ಕಂಡು ಬರುವ ನಿರೀಕ್ಷೆ ಇದೆ.

ದಿನದ ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಗರ್ಸ್‌ ಮತ್ತು ಕೇರಳ ಕೋಬ್ರಾಸ್‌ ತಂಡಗಳು ಪೈಪೋಟಿ ನಡೆಸಲಿವೆ.

ಕೋಬ್ರಾಸ್‌ ತಂಡ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ದಲ್ಲಿ ವಿಜಯಿಯಾಗಿರುವ ಟೈಗರ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿದೆ.

ಬೆಂಗಳೂರಿನಲ್ಲಿ ಒಟ್ಟು ಆರು ದಿನಗಳ ಕಾಲ ಪಂದ್ಯಗಳು ನಡೆಯಲಿದ್ದು ಅಭಿಮಾನಿಗಳು ರೋಚಕ ಹೋರಾಟಗಳನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.